ಜೆಡಿಎಸ್‌ನ ಗೆಲುವಿಗಿಂತ ಹೆಚ್ಚಾಗಿ ರಾಜ್ಯಕ್ಕೆ ಗೆಲುವು ಬೇಕಾಗಿದೆ. 5 ವರ್ಷಗಳಿಂದ ಕಾಂಗ್ರೇಸ್ ದುರಾಡಳಿತ ನಡೆಸಿದೆ. ಜಾತಿ-ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಕಲಹ ಉಂಟು ಮಾಡಲು ಹೋಗಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಕಿಡಿಕಾರಿದ್ದಾರೆ
ಲೋಕಸಭೆಗೆ ನಿಂತಾಗ ಇಂದಿರಾಗಾಂಧಿಯವರ ಕೊಲೆಯಾಗಿತ್ತು, ಎರಡನೇ ಬಾರಿ ರಾಜೀವ್ ಗಾಂಧಿ ಕೊಲೆಯಾಗಿತ್ತು. ಎರಡೂ ಬಾರಿ ಅನುಕಂಪದ ಅಲೆಯಲ್ಲಿ ನಾನು ಸೋತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರಾವಳಿ ಪ್ರದೇಶದಲ್ಲಿ ಕಾಂಗ್ರೇಸ್-ಬಿಜೆಪಿ ಪಕ್ಷಗಳು ಧರ್ಮಗಳ ನಡುವೆ ಒಡಕು ಮೂಡಿಸಿ, ಕೋಮು ಗಲಭೆಗಳನ್ನ ಸೃಷ್ಟಿಸಿದ್ದಾರೆ. ಕೆಲವರು ಓಟಿಗಾಗಿ ರಾಮನನ್ನ ಗುತ್ತಿಗೆ ತೆಗೆದುಕೊಂಡಿದ್ದಾರೆ. ರಾಮನ ಹೆಸರಿನಲ್ಲಿ ಪಾದುಕೆ ಹಾಗೂ ಇಟ್ಟಿಗೆ ಯಾತ್ರೆ ನಡೆಸಿದ್ರು. ಯಾತ್ರೆ ಹೆಸರಿನಲ್ಲಿ ಹಣ ಸಂಗ್ರಹಿಸಿದ್ರು ಅದೆಲ್ಲಿ ಹೋಯ್ತು?ಅಧಿಕಾರಕ್ಕಾಗಿ ಶ್ರೀರಾಮ ಬೇಕು, ಜನರ ಅಭಿವೃದ್ದಿಗಾಗಿ ಬಿಜೆಪಿಯವರು ಬೆಂಕಿ ಹಚ್ಚುತ್ತಾರೆ, ಕಾಂಗ್ರೇಸ್ ನವರು ಅದಕ್ಕೆ ತುಪ್ಪ ಸುರಿಯತ್ತಾರೆ. ದತ್ತಮಾಲೆ ಪ್ರಕರಣವನ್ನ ಮತ್ತೊಂದು ಈದ್ಗಾ ಪ್ರಕರಣವನ್ನಾಗಿ ಮಾಡಿದ್ರು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ವಾಗ್ದಾಳಿ ನಡೆಸಿದರು.