ಶಕ್ತಿ ಯೋಜನೆ ಜಾರಿಯದಾಗಿನಿಂದ ಒಂದಲ್ಲ ಒಂದು ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಒಂದ್ಕಡೆ ಬಸ್ ಫುಲ್ ರಶ್ ಆಗ್ತಿದ್ರೆ, ಇತ್ತ ಹೊಡೆದಾಟ ಬಡೆದಾಟಗಳು ಕೂಡ ಹೆಚ್ಚಾಗ್ತಾನೆ ಇವೆ. ಇನ್ನು ಫ್ರಿ ಬಸ್ ಅಂತಾ ಮಹಿಳೆಯರನ್ನು ಕೇವಲವಾಗಿ ಕೂಡ ಕಾಣ್ತಾಯಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕೋಕೆ ಇದೀಗ ಸಾರಿಗೆ ಇಲಾಖೆ ಹೊಸ ರೂಲ್ಸ್ ತಂದಿದೆ. ಇದರಿಂದ ಕಂಡಕ್ಟರ್ ಡ್ರೈವರ್ ಗಳು ಫುಲ್ ಶಾಕ್ ಆಗಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಶಕ್ತಿ ಯೋಜನೆ ಜಾರಿಯಾಗಿದ್ದೆ ಆಗಿದ್ದು, ಒಂದಲ್ಲ ಒಂದು ಅವಾಂತರಗಳು ಸೃಷ್ಟಿಯಾಗುತ್ತಿವೆ. ನೂಕು ನುಗ್ಗಲು ಗಲಾಟೆಗಳು ಆಗುತ್ತಿದ್ರೆ, ಇತ್ತ ಹೆಣ್ಣು ಮಕ್ಕಳಿಗೆ ಕಂಡಕ್ಟರ್, ಡ್ರೈವರ್ ಗಳು ನಿಂದಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಇನ್ಮುಂದೆ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುವಂತಿಲ್ಲ. ಇನ್ಮುಂದೆ ಮಹಿಳೆಯರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರೆ ಕಂಡಕ್ಟರ್ ಡ್ರೈವರ್ ಡಿಸ್ಮಿಸ್ ಆಗೋದು ಪಕ್ಕ.
ಹೌದು ಇನ್ನು ಶಕ್ತಿ ಯೋಜನೆಯಿಂದ ಒಂದಲ್ಲಾ ಒಂದು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಬಸ್ ಗಳು ರಶ್ ಆಗ್ತಾ ಇವೆ. ಇನ್ನು ಸೀಟಿಗಾಗಿ ವಾದ ವಿವಾದಗಳು ಕೂಡ ಉಂಟಾಗುತ್ತಿವೆ. ಹೀಗಾಗಿ ಕಂಡಕ್ಟರ್ ಡ್ರೈವರ್ ಗಳಿಗೆ ಮೆಂಟೇನ್ ಮಾಡೋದು ಕೂಡ ಕೊಂಚ ಕಷ ಆಗ್ತಯಿದೆ. ಇದನ್ನ ಬಳಸಿಕೊಂಡು ಕಂಡಕ್ಟರ್ ಮತ್ತೆ ಡ್ರೈವರ್ ಗಳು ಮಹಿಳೆಯರಿಗೆ ಮರ್ಯಾದೆ ಕೊಡದೆ ಮಾತನಾಡಿಸುತ್ತಿರುವ ಆರೋಪ ಕೇಳಿ ಬರ್ತಿವೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ನಿಂದಕರಿಗೆ ಪಾಠ ಕಲಿಸಲು ಸಾರಿಗೆ ಇಲಾಖೆ ಇದೀಗ ಮುಂದಾಗಿದೆ. ಕಂಡಕ್ಟರ್ ಡ್ರೈವರ್ ಗಳಿಗೆ ಹೊಸ ಸೂಚನೆ ನೀಡಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸರ್ಕಾರಿ ಬಸ್ಗಳಲ್ಲಿ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರೆ ಅವರಿಗೆ ವಾರ್ನಿಂಗ್ ಕೊಡಲಾಗುತ್ತೆ, ಮತ್ತೇ ಮತ್ತೇ ರಿಪೀಟ್ ಆದ್ರೆ ಡಿಸ್ಮಿಸ್ ಮಾಡಲಾಗುತ್ತದೆ ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಬಸ್ ಸ್ಟ್ಯಾಂಡ್ ಗಳಲ್ಲಿ ಸ್ಟಾಪ್ ಕೊಡದೆ ಅನುಚಿತವಾಗಿ ವರ್ತಿಸುವ ಚಾಲಕ, ನಿರ್ವಾಹಕರಿಗೂ ಕಠಿಣ ಕ್ರಮ ಕೂಡ ಕೈಗೊಳ್ಳಲಾಗುತ್ತೆ ಅಂತಾ ಈಗಾಗಲೇ ನಾಲ್ಕು ನಿಗಮದ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.