ಬಾಲ್ಯದಲ್ಲಿ ಸೈಕಲ್ ತುಳಿಯಲು ಕಲಿತ ದಿನವಂತೂ ಮನಸ್ಸಿಗೆ ಇನ್ನಿಲ್ಲಿದ ಸಂತಸ ತರುತ್ತೆ. ಇನ್ನೂ ಹಳೆಯ ಸೈಕಲ್ ಹಾಳಾಗಿದ್ರೂ ಕೂಡಾ ನೆನಪಿಗೋಸ್ಕರ ಅದನ್ನ ಹಾಗೇ ನಿಲ್ಲಿಸಿರ್ತೇವೆ. ಇದೀಗ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಎರಡನೇ ವಿಶ್ವ ಯುದ್ಧದ ಸಂದರ್ಭ ಬಳಸಿದ್ದ ಸೈಕಲ್ ಗಳನ್ನ ನಿಲ್ಲಿಸಲಾಗಿದ್ದು, ನೋಡುಗರನ್ನ ತನ್ನತ್ತ ಸೆಳೆಯುತ್ತಿದೆ. ಆಗಿನ ಕಾಲದಲ್ಲಿಯೇ ಬ್ರಿಟಿಷ್ ಆರ್ಮ್ ವೇಸ್ ಈ ರೀತಿಯ ಸುಮಾರು ೪೦ ಸಾವಿರಕ್ಕೂ ಹೆಚ್ಚು ಸೈಕಲ್ ಗಳನ್ನ ತಯಾರಿಸಿ ಯುದ್ಧಕ್ಕಾಗಿ ಫ್ಲಾನ್ಸ್, ರಷ್ಯಾ ಹಾಗು ಜಪಾನ್ಗೆ ಕಳುಹಿಸುತ್ತಿದ್ರು ಕೂಡ . ಇನ್ನು ಹಿಂದಿನ ಕಾಲದ ಸೈಕಲ್ ಗಳ ವಿಶೇಷತೆ ಮತ್ತು ಆಗಿನ ಯುಗದಲ್ಲಿ ಹೇಗೆ ಅದನ್ನ ಬಳಸುತ್ತಿದ್ರೂ ಅನ್ನೋ ವಿಚಾರಗಳು ಇಲ್ಲಿಗೆ ಭೇಟಿ ನೀಡಿದ್ರೆ ತಿಳಿಯುತ್ತೆ.