Daily Horoscope
✕

ಮಕ್ಕಳ ಸರಣಿ ಸಾವಿನ ಹಿನ್ನಲೆ: ಕೋಲ್ಡ್ರಿಫ್ ಮಕ್ಕಳ ಸಿರಪ್ ಗೆ ಕರ್ನಾಟಕದಲ್ಲೂ ನಿಷೇಧ

Krishnaveni K
ಶನಿವಾರ, 4 ಅಕ್ಟೋಬರ್ 2025 (17:12 IST)
ಬೆಂಗಳೂರು: ಮಕ್ಕಳ ಸರಣಿ ಸಾವಿನ ನಂತರ ಸ್ರೆಸನ್ ಫಾರ್ಮಾಸ್ಟುಟಿಕಲ್ಸ್ ಕಂಪನಿ ತಯಾರಿಸುವ ಕೋಲ್ಡ್ರಿಫ್ ಸಿರಪ್ ಗೆ ಈಗ ಕರ್ನಾಟಕದಲ್ಲೂ ನಿಷೇಧ ಹೇರಲಾಗಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಘಟನೆಗಳು ವರದಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸಿರಪ್ ಮಾರಾಟ ಮಾಡದಂತೆ ಮತ್ತು ವೈದ್ಯರೂ ಚೀಟಿಯಲ್ಲಿ ಸೂಚಿಸದಂತೆ ಆದೇಶ ನೀಡಿತ್ತು.

ಇದರ ಬೆನ್ನಲ್ಲೇ ಈಗ ರಾಜ್ಯದಲ್ಲೂ ಈ ಸಿರಪ್ ಗೆ ನಿಷೇಧ ಹೇರಲಾಗಿದೆ. ಕೆಪಿಆರ್ ಡಿಪ ಸಂಸ್ಥೆ ತಕ್ಷಣವೇ ಈ ಔಷದಿಯನ್ನು ಎಲ್ಲಾ ಮಾರಾಟಗಾರರು ಮತ್ತು ವಿತರಕರು ಪೂರೈಸದಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ಇರುವ ಸ್ಟಾಕ್ ಗಳನ್ನೂ ಹಿಂಪಡೆಯುವಂತೆ ಸೂಚಿಸಲಾಗಿದೆ.

ನೆಗಡಿ, ಕೆಮ್ಮು ಇತ್ಯಾದಿ ಶೀತ ಸಂಬಂಧೀ ಕಾಯಿಲೆಗಳಿಗೆ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತಿತ್ತು. ಆದರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿಈ ಸಿರಪ್ ಸೇವಿಸಿ ಸುಮಾರು 11 ಮಕ್ಕಳು ಸಾವನ್ನಪ್ಪಿರುವ ವರದಿಯಾಗಿದೆ. ಹೀಗಾಗಿ ಈ ಸಿರಪ್ ನ್ನು ಈಗ ಪರೀಕ್ಷೆಗೊಳಪಡಿಸಲಾಗುತ್ತಿದ್ದು ಇದರ ವರದಿ  ಬರುವವರೆಗೂ ಮಾರಾಟ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪ್ಪರಂಕುಂದ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ ವಕೀಲರು ಇವರೇ ನೋಡಿ

ತಿರುಪ್ಪರಂಕುಂದ್ರ ದೀಪೋತ್ಸವದ ಭದ್ರತೆಗೆ ಬಂದ ಸಿಆರ್ ಪಿಎಫ್ ಯೋಧರಿಗೆ ಎಂಥಾ ಸ್ವಾಗತ ಸಿಕ್ತು ನೋಡಿ Video

ಲಿಖಿತ ಭರವಸೆಗೆ ಪಟ್ಟು ಹಿಡಿದ ಆಶಾ ಕಾರ್ಯಕರ್ತೆಯರು

ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಲು ಸಿದ್ಧತೆ ಬೆನ್ನಲ್ಲೇ ದರ್ಗಾಕ್ಕೆ ಪ್ರಾರ್ಥನೆ ಮಾಡಲು ಗುಂಪಾಗಿ ಬಂದ ಮುಸ್ಲಿಮರು Video

ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಹುಡುಗಿಗೆ ನಂದಿ ಮಾಡಿದ್ದೇನು ನೋಡಿ: ಕ್ಯೂಟ್ Video

ಮುಂದಿನ ಸುದ್ದಿ
Show comments