ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ನಡೆಯಲಿದೆ. ಮೈಸೂರು ದಸರಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ರು. ಬೆಳಗ್ಗೆ 8:30 ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದಲ್ಲಿ ತಿಂಡಿ ಸವಿದ್ರು. ಅಲ್ಲಿಂದ ನೇರವಾಗಿ ಬೆಳಗ್ಗೆ 11 ಗಂಟೆಗೆ ಲಲಿತ ಮಹಲ್ ಪ್ಯಾಲೇಸ್‌ಗೆ ಸಿದ್ದರಾಮಯ್ಯ ತೆರಳಲಿದ್ದಾರೆ.
ಲಲಿತ ಮಹಲ್ ಪ್ಯಾಲೇಸ್‌ನಿಂದ ಸಚಿವರ ಹಾಗೂ ಗಣ್ಯರ ಜೊತೆ ಅರಮನೆಗೆ ಪಯಣ ಬೆಳೆಸಲಿದ್ದಾರೆ. ಮಧ್ಯಾಹ್ನ 1.46 ರಿಂದ 2.08 ರ ಶುಭಲಘ್ನದಲ್ಲಿ ಅರಮನೆಯ ಬಲರಾಮದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪೂಜೆ ಸಲ್ಲಿಸಲಿದ್ದಾರೆ. ನಂತರ ವಿಶ್ವವಿಖ್ಯಾತ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4.40 ರಿಂದ 5 ಗಂಟೆಗೆ ಸಲ್ಲುವ ಶುಭ ಮೀನಾ ಲಘ್ನದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿಗೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.