Select Your Language

Notifications

webdunia
webdunia
webdunia
webdunia

ಸಿಎಂ ತಮ್ಮ ವರಿಷ್ಠರಿಗೆ ದಕ್ಷಿಣೆ ಕೊಡಲು ಹೋಗಿದ್ದಾರೆ: ಹೆಚ್ಡಿಕೆ ವ್ಯಂಗ್ಯ

ಸಿಎಂ ತಮ್ಮ ವರಿಷ್ಠರಿಗೆ ದಕ್ಷಿಣೆ ಕೊಡಲು ಹೋಗಿದ್ದಾರೆ: ಹೆಚ್ಡಿಕೆ ವ್ಯಂಗ್ಯ
ಬೆಂಗಳೂರು , ಶನಿವಾರ, 23 ಮೇ 2015 (15:11 IST)
ಸಿಎಂ ಸಿದ್ದರಾಮಯ್ಯ ಅವರು ಇಂದು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಗಳು ತಮ್ಮ ವರಿಷ್ಠರಿಗೆ ದಕ್ಷಿಣೆ ಕೊಡಲು ತೆರಳಿದ್ದಾರೆ ಎಂದು ವ್ಯಂಗ್ಯವಾಗಿದ್ದಾರೆ. 
 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಇಲ್ಲದೆ ದೆಹಲಿಗೆ ಹಾರಿದ್ದಾರೆ. ಕಾರಣ ತಮ್ಮ ಸಂಪುಟದಲ್ಲಿನ ಕಳಂಕಿತ ಸಚಿವರನ್ನು ರಕ್ಷಿಸುವುದು. ಈ ಹಿನ್ನೆಲೆಯಲ್ಲಿಯೇ ಇಂದು ತಮ್ಮ ವರಿಷ್ಠರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿದ್ದು, ದಕ್ಷಿಣೆ ನೀಡಲು ತೆರಳಿದ್ದಾರೆ ಎಂದು ಅಣಕಿಸಿದರು. 
 
ಇದೇ ವೇಳೆ, ರಾಜ್ಯದಲ್ಲಿ ಒಂದಂಕಿ ಲಾಟರಿ ಪ್ರಕರಣವು ಪೊಲೀಸರ ನಡುವೆಯೇ ಜಟಾಪಟಿ ನಡೆಯುತ್ತಿರುವ ಪರಿಣಾಮ ಪ್ರಕರಣ ಬೆಳಕಿಗೆ ಬರುತ್ತಿದೆ. ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದು, ಸರ್ಕಾರ ಅವರ ಹೆಸರುಗಳನ್ನು ಬಹಿರಂಗಗೊಳಿಸಲಿ. ಅಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು. 
 
ಬಳಿಕ, ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಒಳ್ಳೆಯ ಅಧಿಕಾರಿ ಎಂದು ತಿಳಿದಿದ್ದೆ. ಆದರೆ ಮಾಧ್ಯಮಗಳೊಂದಿಗೆ ಅವರೇ ಪ್ರತಿಕ್ರಿಯಿಸಿದ್ದು, ಪ್ರಕರಣದ ಕಿಂಗ್ ಪಿನ್ ಆಗಿರುವ ರಾಜನ್ ನನ್ನ ಹಿತೈಷಿ ಎಂದಿದ್ದಾರೆ ಎಂದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಪಿ ಧರಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಅದು ನಿರ್ಧಾಕ್ಷಿಣ್ಯ ಕ್ರಮವಲ್ಲ. ಬದಲಾಗಿ ದಲಿತರು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ಆದರೆ ಪ್ರಕರಣದಲ್ಲಿ ಮತ್ತೋರ್ವ ಎಸ್‌ಪಿ ಚಂದ್ರಕಾಂತ್ ಕೂಡ ಆರೋಪಿಯಾಗಿದ್ದು, ಅವರು ಸಿಎಂ ಆಪ್ತರು ಎಂಬ ಕಾರಣದಿಂದ ಅವರನ್ನು ಅಮಾನತು ಮಾಡಲಾಗಿಲ್ಲ. ಇಂತಹ ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು. 

Share this Story:

Follow Webdunia kannada