ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ. ಮಳೆಯಾದರೂ ರೈತರು ಬೆಳೆದ ಬೆಲೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹಳ್ಳಿ-ಕೇರಿ ತೊರೆಯುವವರ ಸಂಖ್ಯೆ ಅಧಿಕವಾಗಿದ್ದು, ಒಂದೊಂದೇ ಕುಟುಂಬಗಳ ಹಳ್ಳಿ ತೊರೆದು ಒಂದು ಇಡೀ ಹಳ್ಳಿಯೇ ಖಾಲಿ ಖಾಲಿಯಾಗಿದೆ.
ಬರಗಾಲ ಪರಿಸ್ಥಿತಿಗೆ ಹೆದರಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅರಳಿಕಟ್ಟಿ ಹುಂಡಿ ಎನ್ನೊ ಇಡೀ ಹಳ್ಳಿ ಖಾಲಿಯಾಗಿದ್ದು, ಇದೀಗ ಈ ಊರಿನಲ್ಲಿ ಕೇವಲ ಎರಡೇ ಎರಡು ಕುಟುಂಬಗಳ ವಾಸಿಸುತ್ತಿವೆ. ಅಷ್ಟಕ್ಕೂ ಈ ಕ್ಷೇತ್ರದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ಬರಗಾಲ ಪರಿಸ್ಥಿತಿಗೆ ಹೆದರಿ ಕಳೆದ ನಾಲ್ಕು ವರ್ಷಗಳಿಂದ ಜನರು ಉರು ತೊರೆಯುತ್ತಿರುವ ಪರಿಣಾಮವಾಗಿ ಇಡೀ ಹಳ್ಳಿಯೇ ಖಾಲಿಯಾಗಿದೆ. ಈ ಉರಿನಲ್ಲಿ 50 ರಿಂದ 60 ಕುಟುಂಬಗಳು ವಾಸವಿದ್ದು, ಇದೀಗ, 2 ಕುಟುಂಬಗಳು ಮಾತ್ರ ವಾಸಿಸುತ್ತಿವೆ.
ಈ ಖಾಲಿ ಖಾಲಿ ಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ, ಪ್ರಾಥಮಿಕ ಶಾಲೆ, ಕುಡಿಯುವ ನೀರಿನ ಟ್ಯಾಂಕ್, ದೇವಸ್ಥಾನ ಎಲ್ಲಾ ಇದೆ. ಆದ್ರೆ, ಎಲ್ಲವೂ ಇದೀಗ ಪಾಳು ಬಿದ್ದಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.