ವಿಧಾನಸೌಧದಲ್ಲಿ ಈಶ್ವರಪ್ಪ-ಸಿಎಂ ಸಿದ್ದು ನಡುವೆ ವಾಕ್ಸಮರ

Webdunia
ಗುರುವಾರ, 8 ಜೂನ್ 2017 (11:59 IST)
ಬೆಂಗಳೂರು: ರೈತರ ಸಾಲಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಈಶ್ವರಪ್ಪ ಮತ್ತು ಸಿಎಂ ಸಿದ್ಧರಾಮಯ್ಯ ನಡುವೆ ಸದನದಲ್ಲಿ ಜೋರಾದ ಮಾತಿನ ಚಕಮಕಿಗೆ ಕಾರಣವಾಯ್ತು.

 
ಬರ ಕುರಿತ ಚರ್ಚೆಯ ಸಂದರ್ಭದಲ್ಲಿ ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ ರಾಜ್ಯದಲ್ಲಿ ಸಾಲಮನ್ನಾ ಮಾಡದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಸಾಲ ಮನ್ನಾ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ ಈಶ್ವರಪ್ಪಗೆ ಟಾಂಗ್ ನೀಡಿದ್ದಾರೆ. ಮೊದಲು ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಲಿ, ನಂತರ ನಾವೂ ಮಾಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಮಾಡಿದ್ದರು. ಎಲ್ಲವನ್ನೂ ಕೇಂದ್ರದತ್ತಲೇ ಬೊಟ್ಟು ಮಾಡುವುದೇಕೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಗದೀಶ್ ಶೆಟ್ಟರ್ ಮಾಡಿದ್ದ 3.5 ಸಾವಿರ ಕೋಟಿ ರೂ. ಸಾಲ ಬೊಕ್ಕಸಕ್ಕೆ ಹೊರೆಯಾಗಿದೆ. ಅದನ್ನು ಯಾರು ತೀರಿಸುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಮಧ್ಯೆ ಉತ್ತರಿಸಿದ ಈಶ್ವರಪ್ಪ ನಾವು ಮುಂದಿನ ಬಾರಿ ಅಧಿಕಾರಕ್ಕೆ ಬರುವಾಗ ತೀರಿಸುತ್ತೇವೆ ಎಂದರು.

ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದು. ನೀವು ಅಧಿಕಾರಕ್ಕೆ ಬರುತ್ತೀರೆಂಬುದು ನಿಮಗೆ ಭ್ರಮೆ. ಉಪಚುನಾವಣೆಯೇ ಇದಕ್ಕೆ ದಿಕ್ಸೂಚಿ ಎಂದರು. ಈ ಮಧ್ಯೆ ಸಭಾಪತಿ ಶಂಕರಮೂರ್ತಿ ಮಧ್ಯಪ್ರವೇಶಿಸಿದರೂ, ಇವರಿಬ್ಬರ ನಡುವೆ ವಾಗ್ವಾದ ಮುಂದುವರಿದೇ ಇತ್ತು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಮುಂದಿನ ಸುದ್ದಿ
Show comments