Webdunia - Bharat's app for daily news and videos

Install App

ಸಾಲ ಮನ್ನಾಗೆ ಬಿಎಸ್‌ವೈ, ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ನಡೆಸಲಿ: ಸಿಎಂ ಸಿದ್ದರಾಮಯ್ಯ

Webdunia
ಬುಧವಾರ, 15 ಮಾರ್ಚ್ 2017 (17:54 IST)
ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ ಎನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಾವು ಈಗಲೂ ಸಾಲ ಮನ್ನಾ ಮಾಡಲು ಸಿದ್ದರಿದ್ದೇವೆ. ರೈತರ ಸಾಲ ಮನ್ನಾ ಮಾಡುವಂತೆ ಯಡಿಯೂರಪ್ಪ ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ನಡೆಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮೊದಲು ಬಿಜೆಪಿಯವರು ಕೇಂದ್ರ ಸರಕಾರದಿಂದ ರೈತರ ಅರ್ಧ ಸಾಲ ಮನ್ನಾ ಮಾಡಿಸಲಿ. ಅದನ್ನು ಬಿಟ್ಟು ಬರುಡೆ ಬಿಡುವುದು ಬೇಡ. ಕೇವಲ ನಾವು ಸಾಲ ಮನ್ನಾ ಮಾಡುವುದರಿಂದ ಅಂತಹ ಪ್ರಯೋಜನವಾಗುವುದಿಲ್ಲ. ಕೇವಲ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಆಗುತ್ತದೆ. ಒಂದು ವೇಳೆ, ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಆಗುತ್ತದೆ ಎಂದು ತಿಳಿಸಿದ್ದಾರೆ.
 
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆದ್ಯತೆ ಕ್ಷೇತ್ರಗಳಿಗೆ ಮಾಡಿರುವ ವೆಚ್ಚಕ್ಕಿಂತ ನಾವು ಹೆಚ್ಚಿನ ವೆಚ್ಚ ಮಾಡಿದ್ದೇವೆ. ಕೇವಲ ಬೊಗಳೆ ಬಿಡುವುದರಿಂದ ರೈತರ ಪರವಾಗುವುದಿಲ್ಲ. ಬಿಜೆಪಿ ನಾಯಕರಿಗೆ ಬೇಕಾಗಿದ್ದಲ್ಲಿ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುತ್ತೇನೆ ಎಂದು ಹೇಳಿದ್ದಾರೆ.
 
ಬಿಜೆಪಿ ನಾಯಕರಿಗೆ ನಿಜವಾಗಿಯೂ ರೈತರ ಕಾಳಜಿಯಿದ್ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಧರಣಿ ಕುಳಿತು ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೋದಿಯವರಿಗೆ ಒತ್ತಾಯಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಸಿವು ಎಂದು ಹೇಳಿದ ಮಗುವನ್ನು ಕೊಂದ ತಾಯಿಗೆ ಜಾಮೀನು, ಕೋರ್ಟ್‌ ಅಭಿಪ್ರಾಯವೇನು ಗೊತ್ತಾ

ಗಣಪತಿ ಚತುರ್ಥಿಗೆ ದಿನಗಣನೆ, ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸೂಚನೆ

ತೆಹಲ್ಕಾ'ದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಶಿಕ್ಷೆಯಾದ ಪ್ರಕರಣ ಹಿನ್ನೆಲೆ ಇಲ್ಲಿದೆ

Video, ವಾಲಿಬಾಲ್ ಆಡುತ್ತಿರುವಾಗಲೇ ಹೃದಯಾಘಾತ, ಎಸ್ಸೆಸ್ಸೆಲ್ಸಿ ಬಾಲಕ‌ ಸ್ಥಳದಲ್ಲೇ ಸಾವು,

ಗಮನ‌ ಸೆಳೆದ ಬನ್ನೇರುಘಟ್ಟದ ಮರಿ‌ ಹಿಪ್ಪೋಗೆ ನಿಮ್ಮ‌ಇಚ್ಛೆಯ ಹೆಸರಿಡಬಹುದು, ಹಾಗಾದರೆ ನೀವೇನು‌ ಮಾಡಬೇಕು‌ ಗೊತ್ತಾ

ಮುಂದಿನ ಸುದ್ದಿ
Show comments