Daily Horoscope
✕

ಅರ್ಕಾವತಿ ಡಿನೋಟಿಫಿಕೇಶನ್`ನಲ್ಲಿ ಸಿಎಂಗೆ ಕ್ಲೀನ್ ಚಿಟ್: ಕುಮಾರಸ್ವಾಮಿ ವ್ಯಂಗ್ಯ

Webdunia
ಗುರುವಾರ, 24 ಆಗಸ್ಟ್ 2017 (09:49 IST)
ಅರ್ಕಾವತಿ ಲೇಔಟ್ ಡಿನೋಟಿಫಿಕೇಶನ್`ನಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ನ್ಯಾ. ಕೆಂಪಣ್ಣ ನೇತೃತ್ವದ ಸಮಿತಿ ಸರ್ಕಾರದ ಮುಖ್ಯ ಕಾರ್ದರ್ಶಿಗೆ ವರದಿ ಸಲ್ಲಿಸಿದೆ. ಡಿನೋಟಿಫಿಕೇಶನ್ನಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಡಿನೋಟಿಫಿಕಶನ್ನಿನಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರ ರಚಿಸಿದ್ದ ವಿಶೇಷ ಅಧಿಕಾರವಿದ್ದ ಭೂಸ್ವಾಧೀನಾಧಿಕಾರಿಗಳೇ ಹೈಕೋರ್ಟ್`ನ 6 ಮಾರ್ಗಸೂಚಿಗಳ ಅನ್ವಯ ಸ್ಥಳ ಪರಿಶೀಲನೆ ನಡೆಸಿ ಡಿನೋಟಿಫೈ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ವರದಿಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನ್ಯಾಯಾಂಗ ತನಿಖೆಗೆ ಒಪ್ಪಿಸಿದ ದಿನವೇ ಹೀಗೆ ಆಗುತ್ತದೆ ಎಂದು ನಾನು ಹೇಳಿದ್ದೆ. ಕೆಂಪಣ್ಣ ಸಮಿತಿಗೆ ಸಿಎಂ ಪಾತ್ರದ ಬಗ್ಗೆ ಸಾಕ್ಷ್ಯಗಳು ಬೇಕಿದ್ದರೆ ನನ್ನನ್ನ ಕೇಳಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದ್ದಕ್ಕಿದ್ದಂತೆ ಗಂಡಕಿ ನದಿಯಲ್ಲಿ ನುಗ್ಗಿ ಬಂದ ಪ್ರವಾಹ: ಭೀಕರ ದೃಶ್ಯ ಸೆರೆ Video

ಪೊಲೀಸ್ ಕಸ್ಟಡಿಯಲ್ಲಿದ್ದ ಅಭಿಜಿತ್ ದಿಪ್ಕೆ ಮತ್ತು ಸ್ನೇಹಿತರು ಕೊನೆಗೂ ರಿಲೀಸ್: ಆದರೆ ಷರತ್ತು ಅನ್ವಯ

ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ಉದ್ಘಾಟನೆ

ಹಸಿದ ಹುಲಿ.. ತನ್ನ ಬೋನಿಗೆ ಅಕಸ್ಮಾತ್ತಾಗಿ ಮನುಷ್ಯ ಬಿದ್ದಾಗ ಆಡಿ ಆಡಿ ತಿಂದೇ ಬಿಟ್ಟಿತು.. ಭಯಾನಕ Video

ಮುಂದಿನ ಸುದ್ದಿ
Show comments