Select Your Language

Notifications

webdunia
webdunia
webdunia
webdunia

ಸಿಎಂ ಇಂತಹ ಕಾರ್ಯ ವೈಖರಿಯನ್ನು ಕೂಡಲೇ ನಿಲ್ಲಿಸಬೇಕು: ಹೆಚ್ಡಿಕೆ.

ಸಿಎಂ ಇಂತಹ ಕಾರ್ಯ ವೈಖರಿಯನ್ನು ಕೂಡಲೇ ನಿಲ್ಲಿಸಬೇಕು: ಹೆಚ್ಡಿಕೆ.
ಬೆಂಗಳೂರು , ಗುರುವಾರ, 5 ಮಾರ್ಚ್ 2015 (15:37 IST)
ಹಗರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ನ್ಯಾಯಾಮೂರ್ತಿಗಳ ಆಯೋಗವನ್ನು ರಚಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಇಂತಹ ನಡವಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ರಾಜ್ಯ ಸರ್ಕಾರವನ್ನು ಇಂದು ಆಗ್ರಹಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಅರ್ಕಾವತಿ ಬಡಾವಣೆ ಪ್ರಕರಣದ ಪರಿಶೀಲನೆ ಮತ್ತು ವರದಿಗಾಗಿ ನ್ಯಾಯಾಮೂರ್ತಿ ಕೆಂಪಣ್ಣ ಆಯೋಗವನ್ನು ರಚಿಸಿದ್ದಾರೆ. ಆದರೆ ಇನ್ನೂ ಎರಡು ವರ್ಷಗಳ ಕಾಲಾವಾಕಾಶ ನೀಡಿದರೂ ಕೂಡ ಆಯೋಗಕ್ಕೆ ವರದಿ ಸಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಸರ್ಕಾರ ಈಗಾಗಲೇ ಪ್ರಕರಣ ಸಂಬಂಧ 1,33,000 ಪುಟಗಳ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಆ ಎಲ್ಲಾ ದಾಖಲೆಗಳನ್ನು ಓದಬೇಕಾದರೆ ಆಯೋಗಕ್ಕೆ ಎರಡು ವರ್ಷ ಕಾಲಾವಕಾಶ ಬೇಕು. ಅಲ್ಲದೆ ಸರ್ಕಾರ ಈಗಾಗಲೇ ನೀಡಿದ್ದ ಅವಧಿಯ ಜೊತೆಗೆ ಹೆಚ್ಚುವರಿಯಾಗಿ 6 ತಿಂಗಳು ನೀಡಿದೆ. ಆದರೂ ವರದಿ ಸಲ್ಲಿಸಲು ಆಯೋಗಕ್ಕೆ ಸಾಧ್ಯವಿಲ್ಲದ ಮಾತು ಎಂದರು. 
 
ಬಳಿಕ, ಹಗರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಮೂರ್ತಿಗಳ ಆಯೋಗವನ್ನು ರಚಿಸುವುದು ತರವಲ್ಲ. ಮುಖ್ಯಮಂತ್ರಿಗಳ ಈ ವರ್ತನೆಯೇ ತೋರುತ್ತದೆ ಅವರು ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು. ಆದ್ದರಿಂದ ಮುಖ್ಯಮಂತ್ರಿಗಳು ತಮ್ಮ ಇಂತಹ ಕಾರ್ಯ ವೈಖರಿಯನ್ನು ಕೂಡಲೇ ನಿಲ್ಲಿಸಬೇಕು ಎಂದರು. 
 
ಇದೇ ವೇಳೆ, ನನಗೆ ಸಿಎಂ ಮೇಲೆ ಯಾವುದೇ ರೀತಿಯ ವೈಯಕ್ತಿಕ ವೈಶಮ್ಯವಿಲ್ಲ. ಆದರೆ ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಮೋಸವಾಗುತ್ತಿದ್ದು, ಪ್ರಕರಣಗಳ ಸತ್ಯಾಸತ್ಯತೆಗಳನ್ನು ತಿಳಿಸಬೇಕಿರುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯಾರಾದರೂ ಸಾಮಾಜಿಕ ಹೋರಾಟಗಾರರು ಮುಂದೆ ಬಂದು ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಬೇಕು. ಆಗ ಮಾತ್ರ ಪ್ರಕರಣದ ನಿಜವಾದ ಬಣ್ಣ ಏನು ಎಂದು ತಿಳಿಯುತ್ತದೆ. ಈ ಹಿಂದೆ ಜಿ ಕೆಟಗೆರಿ ನಿವೇಶನ ಹಂಚಿಕೆ ಸಂಬಂಧ ನ್ಯಾ.ಪದ್ಮರಾಜ್ ನಿಯೋಗವನ್ನು ರಚಿಸಲಾಗಿತ್ತು. ಆದರೆ ಪ್ರಯೋಜನವಾಯಿತೇ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.  

Share this Story:

Follow Webdunia kannada