Select Your Language

Notifications

webdunia
webdunia
webdunia
webdunia

ಪ್ರತೀ ಅಧಿವೇಶನದಲ್ಲಿ ನಿದ್ರಿಸದೆ ಇರದ ಸಿಎಂ ಸಿದ್ದರಾಮಯ್ಯ

ಪ್ರತೀ ಅಧಿವೇಶನದಲ್ಲಿ ನಿದ್ರಿಸದೆ ಇರದ ಸಿಎಂ ಸಿದ್ದರಾಮಯ್ಯ
ಬೆಳಗಾವಿ , ಮಂಗಳವಾರ, 30 ಜೂನ್ 2015 (12:02 IST)
ನಗರದ ಸುವರ್ಣಸೌಧದಲ್ಲಿ ಇಂದು ಮುಂಗಾರು ಅಧಿವೇಶನ ನಡೆಯುತ್ತಿದ್ದು, ಶಾಸಕ ಕೆ.ಸ್.ಪುಟ್ಟಣ್ಣಯ್ಯ ಅವರು ನಿಲುವಳಿ ಸೂಚನೆಯನ್ನು ಮಂಡಿಸುತ್ತಾ ಸರ್ಕಾರದ ಗಮನ ಸೆಳೆಯುತ್ತಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗಡತ್ ನಿದ್ರೆಗೆ ಜಾರಿದ್ದ ಸನ್ನಿವೇಶ ಸದನದಲ್ಲಿ ಇಂದು ಕಂಡು ಬಂದಿದ್ದು, ಮತ್ತೊಮ್ಮೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. 
 
ಸದನದಲ್ಲಿ ಮಾತನಾಡುತ್ತಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಕಬ್ಬು ಬೆಳೆಗಾರರ ಬಾಕಿ ಹಣವನ್ನು ವಾಪಾಸ್ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಗೋಜಿಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದ ಅವರು, ವಾಣಿಜ್ಯಿಕ ಬೆಳೆಗಳಿಗೆ ದರ ನಿಗದಿಗೊಳಿಸಬೇಕು. ಜೊತೆಗೆ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಬಿಡುಗಡೆಗೊಳಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತಿದ್ದರು. 
 
ಈ ವೇಳೆ ಸಿಎಂ ಸಿದ್ದರಾಮಯ್ಯನವರು ನಿಲುವಳಿಯನ್ನು ಆಲಿಸದೆ ಅಧಿವೇಶನಕ್ಕೂ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ತಮ್ಮ ಪಾಡಿಗೆ ತಾವು ಕುಳಿತು ಸುಖ ನಿದ್ರೆಗೆ ಜಾರಿದ್ದರು.

Share this Story:

Follow Webdunia kannada