Webdunia - Bharat's app for daily news and videos

Install App

ಸಿಎಂನ ದುಬಾರಿ ವಾಚ್, ಕನ್ನಡಕ ಹೋಯ್ತು, ಸಾಧಾರಣ ವಾಚ್, ಕನ್ನಡಕ ಬಂತು

Webdunia
ಸೋಮವಾರ, 15 ಫೆಬ್ರವರಿ 2016 (15:49 IST)
ಸಿಎಂ ಸಿದ್ದರಾಮಯ್ಯ ಕಟ್ಟಿಕೊಂಡಿದ್ದ ವಾಚ್ ಮತ್ತು ಕನ್ನಡಕದ ಕುರಿತು ಭಾರೀ ಟೀಕೆ ಟಿಪ್ಪಣಿಗಳು ಕೇಳಿಬಂದ ಬಳಿಕ ದುಬಾರಿ ದರದ ಹ್ಯೂಬ್ಲಾಟ್ ವಜ್ರಖಚಿತ ವಾಚ್ ಬದಲಿಗೆ ಕಡಿಮೆ ದರದ, ಸಾಧಾರಣ ವಾಚ್ ಈಗ ಧರಿಸುತ್ತಿದ್ದು, ಕನ್ನಡಕವನ್ನು ಕೂಡ ಬದಲಿಸಿದ್ದಾರೆ.  

ಈಗ ಸಿಎಂ ಲೆದರ್ ಬೆಲ್ಟ್ ಗೋಲ್ಡನ್ ಡಯಲ್ ವಾಚ್ ಧರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕಟ್ಟಿಕೊಂಡಿದ್ದ ದುಬಾರಿ ವಾಚ್ ದರ ಸುಮಾರು 60 ಲಕ್ಷ ರೂ.ಗಳೆಂದು ಹೇಳಲಾಗುತ್ತಿದ್ದು, ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಮುಖ್ಯಮಂತ್ರಿಗಳು ಸಮಾಜವಾದಿಗಳು ಎಂದು ಹೇಳುತ್ತಿದ್ದು, ಅಷ್ಟೊಂದು ದುಬಾರಿ ದರದ ವಾಚ್ ಅವಶ್ಯಕತೆ ಇದೆಯಾ ಎಂದು ಜನತೆ  ಪ್ರಶ್ನಿಸಿದ್ದರು.

ಜೆಡಿಎಸ್ ಮುಖಂಡ ಕುಮಾರಸ್ವಾಮಿ ಮೊದಲಿಗೆ ಈ ದುಬಾರಿ ವಾಚ್ ಪ್ರಸ್ತಾಪ ಮಾಡಿ ಈ ವಾಚನ್ನು ಉಡುಗೊರೆ ಕೊಟ್ಟವರ ಹೆಸರು ತಿಳಿಸಿ ಎಂದು ಕೇಳಿದ್ದರು. ಇವೆಲ್ಲಾ ವಿವಾದಗಳಿಂದ ದೂರವಿರಲು ಸಾಧಾರಣ ದರದ ವಾಚ್, ಕನ್ನಡಕ ಮುಖ್ಯಮಂತ್ರಿ ಧರಿಸಲಾರಂಭಿಸಿದ್ದಾರೆ.  ಆದರೆ ಹ್ಯೂಬ್ಲಾಟ್ ಕಂಪನಿಯ ದುಬಾರಿ ವಾಚ್ ಎಲ್ಲಿ ಹೋಯಿತು? ಸಿಎಂ ಆ ವಾಚನ್ನು ಮಾರುತ್ತಾರಾ ಅಥವಾ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments