Webdunia - Bharat's app for daily news and videos

Install App

ನಿಮಗೆ ನಾಚಿಕೆಯಾಗಬೇಕು, ಮಾನ ಮರ್ಯಾದೆ ಇದೆಯಾ: ಬಿಜೆಪಿ ವಿರುದ್ಧ ಸಿಎಂ ಗರಂ

Webdunia
ಗುರುವಾರ, 26 ನವೆಂಬರ್ 2015 (13:19 IST)
ಬೆಂಗಳೂರು: ವಿಧಾನಸಭೆಯಲ್ಲಿ ಬರಗಾಲದ ಕುರಿತು ಚರ್ಚೆಯಲ್ಲಿ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡುತ್ತಿದ್ದಾಗಲೇ ಪ್ರತಿಪಕ್ಷದ ಸದಸ್ಯರು ಆಂಜನೇಯ ಅವ್ಯವಹಾರ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಗದ್ದಲವೆಬ್ಬಿಸಿದ ಘಟನೆ ನಡೆಯಿತು.ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಎದ್ದುನಿಂತು ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಚರ್ಚೆಗೆ ಅಡ್ಡಿ ಮಾಡುತ್ತಿದ್ದ ಬಿಜೆಪಿ ಸದಸ್ಯರನ್ನು,   ನಿಮಗೆ ನಾಚಿಕೆಯಾಗಬೇಕು, ಮಾನ ಮರ್ಯಾದೆಯೇನಾದರೂ ಇದೆಯಾ, ಜನ ನಿಮಗೆ ಪಾಠ ಕಲಿಸಿದ್ರೂ ಬುದ್ಧಿ ಬಂದಿಲ್ಲ ಎಂದು ಸಿಎಂ ಕಿಡಿಕಾರಿದರು.  ಮೊದಲಿಗೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಂಜನೇಯ ಪ್ರಕರಣವನ್ನು ಪ್ರಸ್ತಾಪಿಸಿ ನಿಮಗೆ ಎದೆಗಾರಿಕೆ ಇದ್ದರೆ ತಕ್ಷಣವೇ ರಾಜೀನಾಮೆ ಪಡೆಯಿರಿ ಎಂದು ಸಿಎಂಗೆ ಹೇಳಿದರು.

ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆದು ಬಿಜೆಪಿ ವಿರೋಧದ ನಡುವೆ, ಧಿಕ್ಕಾರಗಳ ಘೋಷಣೆ ನಡುವೆಯೂ ಕೃಷ್ಣಭೈರೇಗೌಡ ಉತ್ತರ ನೀಡುತ್ತಿದ್ದ ದೃಶ್ಯ ಕಂಡುಬಂತು. ಸದನದ ಬಾವಿಗಿಳಿದ ಪ್ರತಿಪಕ್ಷದ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಶೇಮ್, ಶೇಮ್ ಎನ್ನುತ್ತಾ  ಪ್ರತಿಭಟನೆ ನಡೆಸಿದರು.  ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಮುಂದುವರಿಯಿತು.

ಪ್ರತಿಪಕ್ಷದ ತೀವ್ರ, ಗದ್ದಲ ಕೋಲಾಹಲಗಳ ನಡುವೆ ಕೃಷ್ಣಭೈರೇಗೌಡರ ಬರಗಾಲದ ಕುರಿತ ಉತ್ತರವು ಯಾರಿಗೂ ಕೇಳಿಸದಾಯಿತು. ಬಿಜೆಪಿ ಸದಸ್ಯರ, ಗದ್ದಲ ಕೋಲಾಹಲದ ನಡುವೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಅದನ್ನು ಅಂಗೀಕರಿಸಲಾಯಿತು. ಬಳಿಕ ಸದನವನ್ನು ಮುಂದೂಡಿ ಪುನಃ 2.50ಕ್ಕೆ ಸೇರುವುದಾಗಿ ಸ್ಪೀಕರ್ ಘೋಷಿಸಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments