Webdunia - Bharat's app for daily news and videos

Install App

ದೇವರು ಹೇಳಿದನಂತೆ; ತಾಯಿಯ ತಲೆ ಕಡಿದು ಬಾಗಿಲಲ್ಲಿಟ್ಟು ಪೂಜಿಸಿದ ಮಗ

Webdunia
ಬುಧವಾರ, 22 ಫೆಬ್ರವರಿ 2017 (09:34 IST)
ಪಾಪಿ ಮಗನೊಬ್ಬ ತನ್ನ ತಾಯಿಯ ತಲೆ ಕಡಿದು ಮನೆ ಬಾಗಿಲಲ್ಲಿಟ್ಟ ಬೀಭತ್ಸ, ಘೋರ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿ ನಡೆದಿದ್ದು ಸಂಪೂರ್ಣ ಜಿಲ್ಲೆ ಬೆಚ್ಚಿಬಿದ್ದಿದೆ.

ದೇವರ ಆದೇಶದಂತೆ ತಾನು ಈ ಕೃತ್ಯವನ್ನು ಮಾಡಿದ್ದೇನೆ ಎಂದು ಆರೋಪಿ ತಿಮ್ಮರಾಜು ಹೇಳುತ್ತಿದ್ದು ಮೃತ ಸಾವಿತ್ರಮ್ಮ 60 ವರ್ಷ ಪ್ರಾಯದವರಾಗಿದ್ದಾರೆ.
 
ನಿನ್ನೆ ರಾತ್ರಿ ತಾಯಿಯ ರುಂಡವನ್ನು ಕಡಿದು ಹತ್ಯೆ ಮಾಡಿದ ತಿಮ್ಮರಾಜು, ರುಂಡವನ್ನು ಬಾಗಿಲ ಬಳಿ ಇಟ್ಟು ಬಳಿಕ ಅದಕ್ಕೆ ಹೂವು, ಕುಂಕುಮ ಹಾಕಿ ಪೂಜೆ ಮಾಡಿದ್ದಾನೆ.
 
ತಿಮ್ಮರಾಜುವಿನ ಕೃತ್ಯದಿಂದ ಬೆಚ್ಚಿಬಿದ್ದ ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಹೊಳಲ್ಕೆರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
 
ಪೊಲೀಸ್ ತನಿಖೆ ವೇಳೆ ತಿಮ್ಮರಾಜು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು ದೇವರು ಮೇಮೇಲೆ ಬಂದು ಈ ರೀತಿ ಮಾಡೆಂದು ಹೇಳಿದ, ಹೀಗಾಗಿ ಕೊಲೆಗೈದೆ ಎಂದಿದ್ದಾನೆ. 
 
ಎರಡು ವರ್ಷದ ಹಿಂದೆ ಪತ್ನಿ ದೂರವಾದ ಬಳಿಕ ತಿಮ್ಮರಾಜು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಸದಾ ತಾಯಿಯೊಂದಿಗೆ ಜಗಳವಾಡಿಕೊಂಡಿರುತ್ತಿದ್ದ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲೆಕ್ಟ್ರಿಕ್ ಬೈಕ್‌ನಲ್ಲಿ ಇರುವಾಗಲೇ ಬ್ಯಾಟರಿ ಸ್ಫೋಟ, ಸಮಯಕ್ಕೆ ಸರಿಯಾಗಿ ದೂರ ಸರಿದಿದ್ದರಿಂದ ಉಳಿಯಿತು ಪ್ರಾಣ , Video

ಫ್ರಿಡ್ಜ್‌ನಲ್ಲಿ ಎತ್ತಿಟ್ಟ ರಸ್‌ಮಲೈ ತಿಂದ್ದಿದ್ದಕ್ಕೆ ಹೊಡೆದಾಡಿಕೊಂಡ ಅಣ್ಣ, ತಮ್ಮನ ಕುಟುಂಬ, ಆಸ್ಪತ್ರೆ ಸೇರಿದ ಇಬ್ಬರು

ಏರುತ್ತಿರುವ ಈರುಳ್ಳಿ, ಸಕ್ಕರೆ ಬೆಲೆ, ತುರ್ತು ಸಭೆ ಕರೆದ ಸಿಎಂ ರೇಖಾ ಗುಪ್ತಾ

SIR ಪ್ರಕ್ರಿಯೆಯು ಆತಂಕಕಾರಿ ಅಂಕಿಅಂಶಗಳನ್ನು ಹೊರತಂದಿದೆ: ಡಿಕೆ ಶಿವಕುಮಾರ್

ಅವಧಿ ಮುಗಿದ ಚಾಕೋಲೇಟ್ ತಿನ್ನಕ್ಕೆ ಯೋಗ್ಯವಲ್ಲವೆಂದು ಕಸದ ರಾಶಿಗೆ ಎಸೆದ್ರೆ, ಈ ಜನ ಹೇಗೇ ನಡೆದುಕೊಂಡ್ರು ನೋಡಿ, Video

ಮುಂದಿನ ಸುದ್ದಿ
Show comments