ಕಳೆದ ಬಾರಿ ಭೂ ಲೋಕ ನಡುಗಿತಲೇ ಎಂದು ಭವಿಷ್ಯ ನುಡಿದಿದ್ದ ಈ ಬಾರಿ ಅದೇ ರೀತಿ ನುಡಿದಿದ್ದರೂ ಹಸೂಗೂಸು ಗೋಳಾಡಿತಲೇ ಎಂದು ಸೇರಿಸಿರುವುದು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.
ಭೂ ಲೋಕ ನಡುಗಿತಲೇ ಅಂದರೆ ಭೂಕಂಪನ, ಸಾಂಕ್ರಾಮಿಕ ರೋಗ ಸೇರಿದಂತೆ ಹಲವು ಅನಾಹುತ ಹಾಗೂ ಅಪಘಾತದ ಮುನ್ಸೂಚನೆ ಆಗಿದೆ. ಆದರೆ ಈ ಬಾರಿ ಹಸೂಗೂಸು ಗೋಳಾಡಿತಲೇ ಅಂದರೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.