Select Your Language

Notifications

webdunia
webdunia
webdunia
webdunia

ಸಂಸದರ ಮನೆಯಲ್ಲಿ ಬಾಲ ಕಾರ್ಮಿಕ: ಸರ್ಕಾರದ ಕ್ರಮವೇನು ?

ಸಂಸದರ ಮನೆಯಲ್ಲಿ ಬಾಲ ಕಾರ್ಮಿಕ: ಸರ್ಕಾರದ ಕ್ರಮವೇನು ?
ಆಗ್ರಾ , ಭಾನುವಾರ, 24 ಮೇ 2015 (10:56 IST)
ಬಾಲಕಾರ್ಮಿಕರನ್ನು ರಕ್ಷಿಸಿ ಶಾಲೆಗೆ ಕಳುಹಿಸುವಂತೆ ಸರ್ಕಾರ ಹಲವಾರು ಜಾಹೀರಾತು ಆಂದೋಲನಗಳನ್ನು ನಡೆಸುತ್ತಿದೆ. ಆದರೆ ಸರ್ಕಾರ ನಡೆಸುವ ಜನಪ್ರತಿನಿಧಿಗಳೇ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ನೀವು ಹಿಂದೆಂದಾದರೂ ಕಂಡಿದ್ದೀರಾ. ಆದರೆ ಇಲ್ಲೊಬ್ಬ ಮಹಾ ಪ್ರತಿನಿಧಿ ಇದ್ದಾರೆ. ವಿಷಯ ಅಂದ್ರೆ ಅವರ ನಿವಾಸದಲ್ಲಿಯೇ ಬಾಲಕಾರ್ಮಿಕನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ. 
 
ಙತ್ತರ ಪ್ರದೇಶ ರಾಜ್ಯದ ಆಗ್ರಾ ಲೋಕಸಭಾ ಸದಸ್ಯ ರಾಮ್‌ ಶಂಕರ್‌ ಕಠಾರಿಯಾ ಅವರ ಮನೆಯಲ್ಲಿ ಬಾಲ ಕಾರ್ಮಿಕನೋರ್ವ ಕೆಲಸ ನಿರ್ವಹಿಸುತ್ತಿದ್ದಾನೆ. 
 
ಪ್ರಕರಣ ಬೆಳಕಿಗೆ ಬಂದ ಬಗೆ:
ಕೇಂದ್ರ ಸರ್ಕಾರದ ಯಶಸ್ವಿ ಆಡಳಿತಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಂಸದ ಕಠಾರಿಯಾ ಅವರ ಮನೆಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಬಂದ ಅತಿಥಿಗಳಿಗೆ ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ. ಈ ವೇಳೆ ಬಾಲ ಕಾರ್ಮಿಕ ಮನೆಯಲ್ಲಿರುವುದು ತಿಳಿದು ಬಂದಿದೆ. 
 
ಇನ್ನು ಈ ಬಗ್ಗೆ ಸಂಸದರೇ ಪ್ರತಿಕ್ರಿಯಿಸಿದ್ದು, ಇದು ಬಾಲ ಕಾರ್ಮಿಕ ಪ್ರಕರಣವಲ್ಲ. ಆತ ನಮ್ಮ ಕುಟುಂಬದ ಸದಸ್ಯ ಎಂದಿದ್ದಾರೆ.

Share this Story:

Follow Webdunia kannada