Webdunia - Bharat's app for daily news and videos

Install App

ಶಾಲೆಯಲ್ಲಿ 100 ರೂ. ಕದ್ದ ಆರೋಪ; ಆತ್ಮಹತ್ಯೆ ಮಾಡಿಕೊಂಡ ಬಾಲಕ

Webdunia
ಗುರುವಾರ, 16 ಫೆಬ್ರವರಿ 2017 (14:13 IST)
ಶಾಲೆಯಲ್ಲಿ ಕಳ್ಳತನದ ಆರೋಪ ಹೊರಿಸಿದರೆಂದು ನೊಂದ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಪವನ್, ಭೈರವೇಶ್ನರ ನಗರದ ಖಾಸಗಿ ಶಾಲೆಯೊಂದರಲ್ಲಿ  7ನೇ ತರಗತಿ ಓದುತ್ತಿದ್ದ.
 
ಬುಧವಾರ ಬಾಲಕನ ತರಗತಿಯಲ್ಲಿ ವಿದ್ಯಾರ್ಥಿಯೋರ್ವ 100 ರೂಪಾಯಿ ಕಳೆದುಕೊಂಡಿದ್ದ. ಸಹಪಾಠಿಗಳಲ್ಲೇ ಯಾರಾದರೂ ಕದ್ದರೆಂಬ ಅನುಮಾನದಲ್ಲಿ ಶಿಕ್ಷಕಿ 17 ವಿದ್ಯಾರ್ಥಿಗಳ ಬ್ಯಾಗ್ ತಪಾಸಣೆ ನಡೆಸಿದ್ದರು. ಆಗ ಪವನ್ ಬ್ಯಾಗ್‌ನಲ್ಲಿ 80 ರೂ ಸಿಕ್ಕಿತ್ತು. ಆತನೇ ಕದ್ದಿದ್ದಾನೆ ಎಂದು ಶಿಕ್ಷಕಿ ಬುದ್ಧಿ ಮಾತು ಹೇಳಿದ್ದರು ಮತ್ತು ಆತನಲ್ಲಿದ್ದ 80ರೂಪಾಯಿಯನ್ನು ಪಡೆದುಕೊಂಡು ಕಳೆದುಕೊಂಡ ವಿದ್ಯಾರ್ಥಿಗೆ ನೀಡಿದ್ದರು.
 
ಆದರೆ ತಾನು ಹಣ ಕದ್ದಿಲ್ಲ, ಯಾರೋ ನನ್ನ ಬ್ಯಾಗ್‌ನಲ್ಲಿ ಹಾಕಿದ್ದಾರೆ ಎಂದು ಪವನ್ ಅಳುತ್ತಾ ಶಿಕ್ಷಕಿಯಲ್ಲಿ ಹೇಳಿದ್ದ.
 
ಘಟನೆಯಿಂದ ನೊಂದಿದ್ದ ಆತ ಸಂಜೆ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾನೆ.
 
ಈ ಕುರಿತು ಪವನ್ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾನೇ ಮಗನಿಗೆ 100 ರೂಪಾಯಿ ನೀಡಿದ್ದೆ. ಅದರಲ್ಲಿ 20ರೂಪಾಯಿ ನೋಟ್-ಬುಕ್, ಪೆನ್‌ಗೆ ಖರ್ಚು ಮಾಡಿ ಉಳಿದ ಹಣವನ್ನಾತ ಬ್ಯಾಗ್ನಲ್ಲಿಟ್ಟುಕೊಂಡಿದ್ದ. ಆದರೆ ಆತ ಹಣ ಕದ್ದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments