Select Your Language

Notifications

webdunia
webdunia
webdunia
webdunia

ನಾಳೆ ಪ್ರಧಾನಿ-ಸಿಎಂ ಭೇಟಿ

ನಾಳೆ ಪ್ರಧಾನಿ-ಸಿಎಂ ಭೇಟಿ
ಬೆಂಗಳೂರು , ಶುಕ್ರವಾರ, 6 ಮೇ 2016 (08:07 IST)
ಭೀಕರ ಬರದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನವದೆಹಲಿಯಲ್ಲಿ ಶನಿವಾರ ಕರೆದಿದ್ದಾರೆ.

ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡುವುದಾಗಿ ಜತೆಗೆ ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವ ಮೋದಿ ಕೃಷಿ– ಕುಡಿಯುವ ನೀರಿನ ಸ್ಥಿತಿಗತಿ, ಮೇವಿನ ಅಭಾವ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ.
 
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಪ್ರಸ್ತುತ ವರ್ಷ ಭೀಕರ ಬರಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗಿತಿಗಳನ್ನು ಪರಿಶೀಲಿಸಿದ್ದರು. ಜಿಲ್ಲಾಡಳಿತದೊಡನೆ ಸಭೆ ನಡೆಸಿ ಮುಂಗಾರು ಆರಂಭವಾಗುವವರೆಗೆ ಬರ ಕಾಮಗಾರಿ ನಿರಂತರವಾಗಿರಲಿ ಎಂದು ಆದೇಶಿಸಿದ್ದರು. ಜತೆಗೆ ಕೇಂದ್ರದಿಂದಲೂ ಕೂಡ ಹೆಚ್ಚಿನ ಬರ ಪರಿಹಾರ ಕೇಳುವುದಾಗಿ ತಿಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಬ್ರಮಣ್ಯ ಸ್ವಾಮಿ ಪೂರ್ವೇತಿಹಾಸ ಕೆದಕಿದ ದಿಗ್ವಿಜಯ್ ಸಿಂಗ್