Select Your Language

Notifications

webdunia
webdunia
webdunia
webdunia

ಯುವತಿಯ ಫೋಟೋಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದ ಯುವಕನ ಬಂಧನ

ಯುವತಿಯ ಫೋಟೋಗಳನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದ ಯುವಕನ ಬಂಧನ
ಬೆಂಗಳೂರು , ಗುರುವಾರ, 28 ಜನವರಿ 2016 (16:14 IST)
ಯುವತಿಯೊಬ್ಬಳ ಭಾವಚಿತ್ರಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಚೆನ್ನೈ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳುಗಳ ಹಿಂದೆ 21 ವರ್ಷ ವಯಸ್ಸಿನ ಅಹ್ಮದ್ ಅಲಿ, ಫೇಸ್‌ಬುಕ್‌ನಲ್ಲಿ ಬೆಂಗಳೂರು ಮೂಲದ ಯುವತಿಗೆ ಪರಿಚಿತನಾಗಿದ್ದ. ಪರಿಚಯ ನಂತರ ಗೆಳೆತನಕ್ಕೆ ತಿರುಗಿ ಆತ್ಮಿಯ ಗೆಳೆಯರಾಗಿದ್ದರು. ತಮ್ಮ ತಮ್ಮ ವೈಯಕ್ತಿಕ ಫೋಟೋಗಳನ್ನು ಕೂಡಾ ಬದಲಾಯಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಅಹ್ಮದ್ ಅಲಿ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದ. ತದ ನಂತರ ಹಣ ನೀಡುವಂತೆ ಯುವತಿಗೆ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
 
ಯುವತಿ ಹಣವನ್ನು ನೀಡಲು ನಿರಾಕರಿಸಿದಾಗ ಆಕೆಯ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ. ಆದರೆ, ಆತನ ಬೆದರಿಕೆಗೆ ಯುವತಿ ಮಣಿಯದಾದಾಗ ಯುವತಿಯ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡಿದ್ದ. 
 
ಆರೋಪಿ ಅಹ್ಮದ್ ಅಲಿಯ ಕೃತ್ಯದಿಂದ ಗಾಬರಿಗೊಂಡ ಯುವತಿ 20 ಸಾವಿರ ರೂಪಾಯಿಗಳನ್ನು ನೀಡಿದ್ದಾಳೆ. ಹಣ ನೀಡಿದ ನಂತರ ಆಕೆಯ ಫೋಟೋಗಳನ್ನು ಡಿಲಿಟ್ ಮಾಡಿದ್ದಾನೆ.ಆದರೆ, ಹಣ ನೀಡದಿದ್ದಲ್ಲಿ ಮತ್ತೆ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾಳೆ.
 
ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಚೆನ್ನೈ ಮೂಲದ ಆರೋಪಿ ಅಹ್ಮದ್ ಅಲಿ ಎಂಬಾತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

Share this Story:

Follow Webdunia kannada