Select Your Language

Notifications

webdunia
webdunia
webdunia
webdunia

ರಿಯಲ್ ಎಸ್ಟೇಟ್ ಮಸೂದೆ ಜಾರಿಗೆ ಚಿಂತನೆ: ಸದನದಲ್ಲಿ ಕೋಲಾಹಲ

ರಿಯಲ್ ಎಸ್ಟೇಟ್ ಮಸೂದೆ ಜಾರಿಗೆ ಚಿಂತನೆ: ಸದನದಲ್ಲಿ ಕೋಲಾಹಲ
ನವದೆಹಲಿ , ಮಂಗಳವಾರ, 5 ಮೇ 2015 (11:39 IST)
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಂದು ನಡೆಯುತ್ತಿರುವ ಅಧಿವೇಶನದಲ್ಲಿ ರಿಯಲ್ ಎಸ್ಟೇಟ್ ಹಾಗೂ ಸರಕು ಮತ್ತು ಸುಂಕ ಮಸೂದೆಯನ್ನು ಜಾರಿಗೆ ತರಲು ಮುಂದಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.  
 
ಮಸೂದೆ ಮಂಡನೆಗೆ ಸರ್ಕಾರ ಪ್ರಸ್ತಾವನೆ ಹೊರಡಿಸಿ ಮಂಡನೆಗೆ ಮುಂದಾಗಿತ್ತು. ಆದರೆ ಈ ಬಗ್ಗೆ ಸದನದಲ್ಲಿ ತಕಾರವೆತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸರ್ಕಾರ ಅನುಮೋದಿಸಲು ಹೋರಟಿರುವ ರಿಯಲ್ ಎಸ್ಟೇಟ್ ಮಸೂದೆಯು ಬಿಲ್ಡರ್‌ಗಳ ಪರವಾಗಿದ್ದು, ಬಳಕೆದಾರರ ವಿರೋಧಿಯಾಗಿದೆ. ಇದು ಸಾರ್ವಜನಿಕರ ಪರವಾಗಿಲ್ಲ. ಆದ್ದರಿಂದ ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ಸರ್ಕಾರವನ್ನು  ಕುಟುಕಿದರು. 
 
ಇನ್ನು ಎರಡೂ ಮಸೂದೆಗಳ ಜಾರಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್ ಪಕ್ಷವು ರಿಯಲ್ ಎಸ್ಟೇಟ್ ಮಸೂದೆಯನ್ನು ವಿರೋಧಿಸಿ ಸರಕು ಮತ್ತು ಸುಂಕ ಮಸೂದೆಗೆ ಬೆಂಬಲ ಸೂಚಿಸಿದೆ. ತೃಣಮೂಲ ಕಾಂಗ್ರೆಸ್‌ನ ಈ ಕಾರ್ಯವೈಖರಿ ಪ್ರತಿಪಕ್ಷಗಳಲ್ಲಿ ಅಚ್ಚರಿ ಮೂಡಿಸಿದೆ. 
 
ಈ ಮಸೂದೆಗಳ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲಿಯೂ ಕೂಡ ವಿರೋಧ ವ್ಯಕ್ತವಾಗಿದ್ದು, ಸದನದಲ್ಲಿ ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು. ಇದರಿಂದ ಸದನದಲ್ಲಿ ತೀವ್ರ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷರು ಸದನವನ್ನು ಮುಂದೂಡಿದರು. 

Share this Story:

Follow Webdunia kannada