Select Your Language

Notifications

webdunia
webdunia
webdunia
webdunia

ಶಾಲೆಗಳಲ್ಲಿ ಮತ್ತು ಬಸ್‌ಗಳಲ್ಲಿ ಸಿಸಿ ಟಿವಿ ಕಡ್ಡಾಯ

ಶಾಲೆಗಳಲ್ಲಿ ಮತ್ತು ಬಸ್‌ಗಳಲ್ಲಿ ಸಿಸಿ ಟಿವಿ ಕಡ್ಡಾಯ
ಬೆಂಗಳೂರು , ಭಾನುವಾರ, 27 ಜುಲೈ 2014 (17:40 IST)
ಶಾಲೆಗಳಲ್ಲಿ ಮತ್ತು ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಮತ್ತು ಜಿಪಿಎಸ್ ಸಾಧನವನ್ನು  ಕಡ್ಡಾಯವಾಗಿ ಅಳವಡಿಸಬೇಕು ಎಂದು  ನಗರದ ಪೊಲೀಸ್  ಇಲಾಖೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಅಲ್ಲದೇ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಫ್ಲೋರ್  ವಿಜಿಲೆನ್ಸ್ ಅಧಿಕಾರಿಗಳನ್ನು (FVOs)  ನೇಮಿಸಬೇಕು ಎಂದು ಸಹ ಪೋಲಿಸ್ ಇಲಾಖೆ ಆದೇಶ ಹೊರಡಿಸಿದೆ. 

ಸಿಸಿ ಕ್ಯಾಮರಾಗಳ ಅನುಸ್ಥಾಪನೆಗೆ ಆಗಸ್ಟ್ 31ರವರೆಗೆ ಗಡುವು ನೀಡಲಾಗಿದೆ.  
 
ಇತ್ತೀಚಿಗೆ ಮಾರತ ಹಳ್ಳಿಯ ವಿಬ್‌ಗಯಾರ್ ಶಾಲೆಯಲ್ಲಿ ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಯತ್ನ ನಡೆದ ಹಿನ್ನೆಲೆಯಲ್ಲಿ ಮತ್ತು ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಗೆ ಈ ಕ್ರಮವನ್ನು ಕೈಗೊಂಡಿದೆ.  

Share this Story:

Follow Webdunia kannada