ಚಿನ್ನ ಅಡವಿಡುವ ಮುನ್ನ ಎಚ್ಚರ...!!!

Webdunia
ಮಂಗಳವಾರ, 1 ಫೆಬ್ರವರಿ 2022 (18:15 IST)
ಅಸಲಿ ಚಿನ್ನವನ್ನ ಗಿರವಿ ಇಟ್ಟುಕೊಂಡ ಖಾಸಗಿ ಫೈನಾನ್ಸ್ ಕಂಪನಿಯೊಂದು ತನ್ನ ಗ್ರಾಹಕನಿಗೆ ನಕಲಿ ಚಿನ್ನ ನೀಡಿ ವಂಚಿಸಿದ ಪ್ರಕರಣವೊಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಕೋಶಮಟ್ಟಂ ಫೈನಾನ್ಸ್ ಕಂಪನಿ ಗ್ರಾಹಕನಿಗೆ ಪಂಗನಾಮ ಹಾಕಿದೆ.ಮಾದಾಪುರ ಗ್ರಾಮದ ಮಹೇಶ್ ಎಂಬುವರು ಫೈನಾನ್ಸ್ ನಿಂದ ವಂಚನೆಗೆ ಒಳಗಾಗಿದ್ದಾರೆ.2021 ಆಗಸ್ಟ್ ನಲ್ಲಿ ಮಹೇಶ್ ರವರು ಹುಲ್ಲಹಳ್ಳಿಯಲ್ಲಿರುವ ಕೋಶಮಟ್ಟಂ ಫೈನಾನ್ಸ್ ನಲ್ಲಿ ಚಿನ್ನದ ಸರವನ್ನು 42 ಸಾವಿರ ರೂಗಳಿಗೆ ಗಿರವಿ ಇಟ್ಟಿದ್ದಾರೆ.
ಸಾಲದ ಹಣ ಹಿಂದಿರುಗಿಸಿ ಚಿನ್ನ ಪಡೆದಾಗ ನಕಲಿ ಕೊಟ್ಟಿದ್ದಾರೆ.ಈ ಬಗ್ಗೆ ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿಗಳು ಸಮರ್ಪಕ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ನಕಲಿ ಚಿನ್ನ ಪಡೆದು ಮೋಸ ಹೋದ ಮಹೇಶ್ ರವರು ನ್ಯಾಯಕ್ಕಾಗಿ ಹುಲ್ಲಹಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ.
 
ಕಂಪ್ಲೇಂಟ್ ಕೊಡ್ತೀನಿ ಅಂದ್ರೂ ಲೆಕ್ಕಿಸದ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ.ಕೋಶಮಟ್ಟಂ ಫೈನಾನ್ಸ್ ವಿರುದ್ದ ವಂಚನೆಗೆ ಒಳಗಾದ ಮಹೇಶ್ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಯವಾಗಿದೆ ಟ್ರೀಟ್ಮೆಂಟ್ ಕೊಡಿ ಎಂದು ಸೀದಾ ಕ್ಲಿನಿಕ್ ಗೇ ಬಂದ ನಾಯಿ: Viral Video

ಬಳ್ಳಾರಿ ಫೈರಿಂಗ್‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಸತೀಶ್ ರೆಡ್ಡಿಯ ಮೂವರು ಗನ್‌ಮ್ಯಾನ್‌ಗಳಿಗೆ ಪೊಲೀಸರ ಗ್ರಿಲ್‌

ಬಾಂಗ್ಲಾದೇಶ ಹಿಂದೂಗಳ ಬಗ್ಗೆ ಕೇಳಿದಾಗ ಎದ್ದು ಹೋದ ಜೈರಾಂ ರಮೇಶ್, ಕೆಸಿ ವೇಣುಗೋಪಾಲ್ Video

ಗುಂಡಿನ ಘರ್ಷಣೆಯ ಬೆನ್ನಲ್ಲೇ ಸರ್ಕಾರದ ಮುಂದೆ ಹೊಸ ಬೇಡಿಕೆಯಿಟ್ಟ ಶಾಸಕ ಗಾಲಿ ಜನಾರ್ದನ ರೆಡ್ಡಿ

ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬರಿಗೆ ಅವಮಾನ: ಮಿಯಾರು ಕಂಬಳದಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments