Select Your Language

Notifications

webdunia
webdunia
webdunia
webdunia

ಕೆಂಗೇರಿ ಸಮೀಪ ಎರಡು ಕಾರುಗಳ ಮುಖಾಮುಖಿ ಡಿಕ್ಕಿ: ದಂಪತಿ, ಮಗು ಸಾವು

ಕೆಂಗೇರಿ ಸಮೀಪ ಎರಡು ಕಾರುಗಳ ಮುಖಾಮುಖಿ ಡಿಕ್ಕಿ: ದಂಪತಿ, ಮಗು ಸಾವು
ಬೆಂಗಳೂರು: , ಭಾನುವಾರ, 17 ಜುಲೈ 2016 (19:15 IST)
ಬೆಂಗಳೂರು ಹೊರವಲಯದ ಕೆಂಗೇರಿ ಸಮೀಪ  ನೈಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಭೀಕರ ಘಟನೆ ಸಂಭವಿಸಿದೆ.

ಸ್ವಿಫ್ಟ್ ಮತ್ತು ಓಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ ಓಮ್ನಿಯಲ್ಲಿದ್ದ ಪತಿ, ಪತ್ನಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಪರಿಸ್ಥಿತಿ ಕೂಡ ಗಂಭೀರವೆಂದು ಹೇಳಲಾಗುತ್ತಿದೆ.

ಓಮ್ನಿ ಕಾರು ಅತೀ ವೇಗದಲ್ಲಿ ಡಿವೈಡರ್ ಹಾರಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದ ಮರ್ಯಾದೆ ಉಳಿಸಲು ರೂಪದರ್ಶಿ ಕಂದೀಲ್ ಬಲೋಚ್‌ ಹತ್ಯೆ