Webdunia - Bharat's app for daily news and videos

Install App

ಮತಗಟ್ಟೆಗೆ ನುಗ್ಗಿ ತನಗೇ ಮತ ಹಾಕುವಂತೆ ಅಭ್ಯರ್ಥಿ ಒತ್ತಾಯ: ಹೊರ ದಬ್ಬಿದ ಪೊಲೀಸರು

Webdunia
ಶುಕ್ರವಾರ, 29 ಮೇ 2015 (11:33 IST)
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಮತದಾನ ಕಾರ್ಯ ರಂಗೇರಿದ್ದು, ಮತಗಟ್ಟೆಯೊಂದರ ಒಳಗೆ ನುಗ್ಗಿದ ಅಭ್ಯರ್ಥಿಯೋರ್ವರು ಮತದಾರರಿಗೆ ತನಗೇ ಮತ ಹಾಕುವಂತೆ ಪುಸಲಾಯಿಸಿದ ಘಟನೆ ತಾಲೂಕಿನ ಶಿರಗುಪ್ಪಿ ತಾಂಡಾ ವ್ಯಾಪ್ತಿಯಲ್ಲಿ ನಡೆದಿದೆ. 
 
ತನಗೇ ಮತ ಚಲಾಯಿಸುವಂತೆ ಪುಸಲಾಯಿಸಿದ ಅಭ್ಯರ್ಥಿಯನ್ನು ಸಂಗೀತಾ ಪುಂಡಲೀಕ ನಾಯಕ್ ಎಂದು ಹೇಳಲಾಗಿದ್ದು, ಇವರು ಮತ ಚಲಾಯಿಸಲು ಒಳ ಪ್ರವೇಶಿದ್ದ ಮತದಾದಾರರೋರ್ವರಿಗೆ ತನಗೇ ಮತಚಲಾಯಿಸುವಂತೆ ಮತಗಟ್ಟೆಯೊಳಗೆ ನುಗ್ಗಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಪ್ರತಿಸ್ಪರ್ಧಿ ಜಯಶ್ರೀ ಅವರು ಕುಪಿತಗೊಂಡು ಸಂಗೀತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಕಾದಾಟ ಉಂಟಾಗಿದೆ. ಆದರೆ ಆಕ್ರೋಶಭರಿತ ಬೆಂಬಲಿಗರನ್ನು ಚದುರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪುಸಲಾಯಿಸಿದ ಅಭ್ಯರ್ಥಿಯನ್ನು ಮತಗಟ್ಟೆಯಿಂದ ಹೊರ ಹಾಕಿದ್ದಾರೆ. 
 
ಇಂದು ರಾಜ್ಯದಲ್ಲಿನ ಹಲವು ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆಯುತ್ತಿದ್ದು, ಇದು ಒಂದನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೂ ಕೂಡ ಮತದಾನದ ಕಾರ್ಯ ಬಿರುಸಾಗಿ ಸಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments