Select Your Language

Notifications

webdunia
webdunia
webdunia
webdunia

ಸಿಎಂಗೆ ನಾಚಿಕೆ ಆಗಬೇಕು, ಕುಡಿಯುವ ನೀರಿಗೂ ಭಿಕ್ಷೆ ಬೇಡಬೇಕಾ? ಕಣ್ಣೀರಿಟ್ಟ ದೇವೇಗೌಡರು

ಸಿಎಂಗೆ ನಾಚಿಕೆ ಆಗಬೇಕು, ಕುಡಿಯುವ ನೀರಿಗೂ ಭಿಕ್ಷೆ ಬೇಡಬೇಕಾ?  ಕಣ್ಣೀರಿಟ್ಟ ದೇವೇಗೌಡರು
ಹಾಸನ: , ಶನಿವಾರ, 25 ಫೆಬ್ರವರಿ 2017 (17:52 IST)
ನಾನು ಜೀವಂತವಿರುವಾಗಲೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ ದೇವೇಗೌಡರು, ಆತನಿಗೆ ನಾಚಿಕೆ ಆಗಬೇಕು, ಕುಡಿಯುವ ನೀರಿಗೂ ಭಿಕ್ಷೆ ಬೇಡಬೇಕಾ? ಎಂದು ವಾಗ್ದಾಳಿ ನಡೆಸಿದರು.
 
ಜೆಡಿಎಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಭೇಟಿ ನೀಡಲು ಅಧಿಕಾರಿಗಳು ಭತ್ಯೆ ಪಡೆಯುವುದಿಲ್ಲವೇ? ಕೇವಲ ಸಭೆ ನಡೆಸಿದ್ದೇವೆ. ಚರ್ಚೆ ನಡೆಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
 
ಕೆಆರ್‌ಎಸ್‌ ಗೆ ಹೇಮಾವತಿ ಡ್ಯಾಂ ನೀರು ಬಿಡುಗಡೆ ವಿರೋಧಿಸಿ ಹಾಸನ ಬಂದ್`ಗೆ ಜೆಡಿಎಸ್ ಸೇರಿ ವಿವಿಧ ಸಂಘಟನೆಗಳು ಬಂದ್`ಗೆ ಕರೆ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು,  ಡಿಸಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಭಾಗವಹಿಸಿದ್ದರು
 
ನಮ್ಮಲ್ಲೇ ನೀರಿನ ಕೊರತೆ ಇದೆ ಅಂತಹುದರಲ್ಲಿ ನಮ್ಮ  ಭಾವನೆಗಳಿಗೆ ಬೆಲೆ ಕೊಡದೇ ಕೆಆರ್‌ಎಸ್‌ಗೆ ನೀರು ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ ಎಂಬುದು ಜನರ ಆಕ್ರೋಶವಾಗಿದೆ.
 
ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡರು, ನಾನು ತಾಳ್ಮೆ ಕಳೆದುಕೊಂಡಿದ್ದೇನೆ. ಕೂಡಲೇ ಹೇಮಾವತಿಯಿಂದ ಕೆಆರ್`ಎಸ್`ಗೆ ನೀರು ಬಿಡುಗಡೆ ನಿಲ್ಲಿಸಬೇಕು. ಇಲ್ಲವಾದರೆ ಸಿಎಂ ಮನೆಮುಂದೆ ಪ್ರತಿಭಟನೆ ನಡೆಸುವುದಾಗಿ ದೇವೇಗೌಡರು ಎಚ್ಚರಿಕೆ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಒಬ್ಬನೇ ಒಬ್ಬ ನಾಯಕನಿಗೆ ನನ್ನನ್ನು ಪ್ರಶ್ನಿಸುವ ತಾಕತ್ತಿಲ್ಲ: ಡಿಕೆಶಿ ಗುಡುಗು