Select Your Language

Notifications

webdunia
webdunia
webdunia
webdunia

ನರ್ಸ್‌ ವೇಷದಲ್ಲಿ ಬಂದು ಮಗುವನ್ನು ಕದ್ದೊಯ್ದ ಮಕ್ಕಳ ಕಳ್ಳಿ!

ನರ್ಸ್‌ ವೇಷದಲ್ಲಿ ಬಂದು ಮಗುವನ್ನು ಕದ್ದೊಯ್ದ ಮಕ್ಕಳ ಕಳ್ಳಿ!
ಬೆಳಗಾವಿ , ಬುಧವಾರ, 23 ಜುಲೈ 2014 (16:35 IST)
ನರ್ಸ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಮಗುವಿನ ಇಸಿಜಿ ಮಾಡಿಸುವುದಾಗಿ ಹೇಳಿ  ಗಂಡು ಮಗುವನ್ನು ಕದ್ದೊಯ್ದಿದ್ದಾಳೆ. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ನರ್ಸ್ ವೇಷಧಾರಿಯಾಗಿ ಮಗುವಿನ ತಾಯಿ ಬಳಿ ಮಗುವಿನ ಇಸಿಜಿ ಮಾಡಿಸಬೇಕು ಎಂದು ಹೇಳಿ ಮಗುವನ್ನು ತೆಗೆದುಕೊಂಡು ಹೋದಳು.

ನರ್ಸ್ ಉಡುಪಿನಲ್ಲಿದ್ದ ಮಹಿಳೆಯನ್ನು ನರ್ಸ್ ಎಂದೇ ಭಾವಿಸಿದ ಮಗುವಿನ ತಾಯಿ ಮಗುವನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದರು. ಎಷ್ಟು ಹೊತ್ತಾದರೂ ಮಗು ಬರದಿದ್ದಾಗ ಅದರ ತಾಯಿ ವಿಚಾರಿಸಿದಾಗ ಅವಳು ದಾದಿಯಲ್ಲ, ಮಗುವಿನ ಕಳ್ಳಿ ಎನ್ನುವುದು ಗೊತ್ತಾಗಿದೆ. ಮಹಿಳೆಯ ಸಿಸಿಟಿವಿ ಫೂಟೇಜ್ ಬಿಡುಗಡೆಯಾಗಿದ್ದು,  ಅದರಲ್ಲಿ ಆಸ್ಪತ್ರೆಯ ಕೋಣೆಯಲ್ಲಿ ಮಗುವಿನ ಇಸಿಜಿ ಮಾಡಬೇಕು ಎಂದು ಮಗುವನ್ನು ಎತ್ತಿಕೊಂಡು ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಕ್ಕದ ಬೆಡ್‌ನಲ್ಲಿದ್ದ ಹೆಣ್ಣುಮಗುವನ್ನು ಕೂಡ ಅವಳು ತೆಗೆದುಕೊಂಡು ಹೋಗಿ ಚುಚ್ಚುಮದ್ದು ನೀಡಿದ್ದೇನೆಂದು ಹೇಳಿ ಹೆಣ್ಣುಮಗುವನ್ನು ವಾಪಸ್ ಕೊಟ್ಟು ಹೋಗಿದ್ದಳು. ಮಗುವನ್ನು ನರ್ಸ್ ವೇಷದಲ್ಲಿ ಬಂದು ಎತ್ತಿಕೊಂಡು ಹೋಗಲು ಆಸ್ಪತ್ರೆಯ ಸಿಬ್ಬಂದಿ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. 

Share this Story:

Follow Webdunia kannada