Webdunia - Bharat's app for daily news and videos

Install App

ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ: ಬೆಂಗಳೂರಿನಲ್ಲಿ ಮರುಕಳಿಸಿದ ನಿರ್ಭಯಾ ಅತ್ಯಾಚಾರ

Webdunia
ಮಂಗಳವಾರ, 6 ಅಕ್ಟೋಬರ್ 2015 (10:32 IST)
ಕಳೆದ 3 ವರ್ಷಗಳ ಹಿಂದೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ದೆಹಲಿ ಗ್ಯಾಂಗ್‌ರೇಪ್‌ನ್ನು ಹೋಲುವ ಘಟನೆ ನಮ್ಮ ಬೆಂಗಳೂರಿನಲ್ಲೇ ನಡೆದಿದ್ದು ಚಲಿಸುತ್ತಿರುವ ವಾಹನದಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಕಳೆದ ಶನಿವಾರ ಈ ಕರಾಳ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೀಡಿತಳು ಮಧ್ಯಪ್ರದೇಶದ ಗ್ವಾಲಿಯರ್ ಮೂಲದವಳಾಗಿದ್ದಾಳೆ. 
 
ಪೀಡಿತ ಯುವತಿ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದು, ಶನಿವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಳು. ಮಡಿವಾಳದ ಶನಿ ಮಹಾತ್ಮ ದೇವಸ್ಥಾನದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಯುವತಿಗೆ ಆಕೆಯ ಪರಿಚಯಿಸ್ಥನೇ ಆದ ವ್ಯಕ್ತಿಯೊಬ್ಬ ಡ್ರಾಪ್ ಕೊಡುವ ನೆಪದಲ್ಲಿ ಟೆಂಪೋ ಟ್ರಾವೆಲರ್‌ನ್ನು ಹತ್ತಿಸಿಕೊಂಡಿದ್ದಾನೆ. ಆತನ ಜತೆ ಮತ್ತಿಬ್ಬರು ಸಹ ಟೆಂಪೋದಲ್ಲಿದ್ದರು. ದುಷ್ಕರ್ಮಿಗಳು ಸರ್ಜಾಪುರಕ್ಕೆ ಹೋಗಬೇಕಾಗಿದ್ದ ಯುವತಿಯನ್ನು ಕೋರಮಂಗಲ ಮಾರ್ಗವಾಗಿ ದೊಮ್ಮಲೂರು ಬಳಿ ಕರೆದೊಯ್ದಿದ್ದಾರೆ. ಟೆಂಪೋ ಚಲಿಸುವ ವೇಳೆಯಲ್ಲೇ ಚಾಕು ತೋರಿಸಿ ಬೆದರಿಸಿ ಮೂವರೂ ಕಾಮುಕರು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ. 
 
ಅತ್ಯಾಚಾರ ನಡೆಸುವ ವೇಳೆ ಯುವತಿಯ ಆಕ್ರಂದನ ಹೊರಗೆ ಕೇಳದಿರಲಿ ಎಂದು ದುಷ್ಕರ್ಮಿಗಳು ದೊಡ್ಡ ವಾಲ್ಯುಮ್‌ನಲ್ಲಿ ಹಾಡನ್ನು ಪ್ಲೇ ಮಾಡಿದ್ದರು ಎಂದು ತಿಳಿದುಬಂದಿದೆ. 
 
ಅತ್ಯಾಚಾರವೆಸಗಿದ ನಂತರ ರಾತ್ರಿ 2.30 ರ ವೇಳೆಗೆ ಆಕೆಯನ್ನು  ಮಡಿವಾಳದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಾರೆ. 
 
ಘಟನೆ ಬಳಿಕ ಯುವತಿ ತನ್ನ ಸ್ನೇಹಿತರಿಗೆ ತಿಳಿಸಿ, ಅವರ ಜತೆ ಮಡಿವಾಳ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಕೂಡಲೇ ಯುವತಿಯನ್ನು ಸೆಂಟ್‌ಜಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಲಾಗಿದೆ. 
 
ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾಗಿ  ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಯುವತಿ ಹೇಳಿಕೆಯನ್ನು ದಾಖಲಿಸಿದ್ದಾಳೆ. ಟೆಂಪೋ ಚಾಲಕ ತನಗೆ ಪರಿಚಯವಿದ್ದು ಈ ಹಿಂದೆ ಕೂಡ ಆ ವಾಹನದಲ್ಲಿ ಚಲಿಸಿದ್ದಾಗಿ, ಅತ್ಯಾಚಾರಿಗಳು ಕನ್ನಡ ಮಾತನಾಡುತ್ತಿದ್ದರು ಎಂಬುದಾಗಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments