Daily Horoscope
✕

ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ

ಕೃಷ್ಣವೇಣಿ ಕೆ
ಮಂಗಳವಾರ, 20 ಅಕ್ಟೋಬರ್ 2026 (12:39 IST)
ಬೆಂಗಳೂರು: ಇಡೀ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ. ಮೋದಿ ಅವರು ಬಂದ ಮೇಲೆ ಎಂಎಸ್ ಪಿ ತಂದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
 
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಥೆನಾಲ್ ಉತ್ಪಾದನೆಗೆ ಮೋದಿ ಅವರು ಅವಕಾಶ ನೀಡಿದರು. ಕಬ್ಬು ಅರೆಯುವ ಕಾರ್ಖಾನೆಗಳಿಗೆ ಅನುಕೂಲ ಆಗುವ ನೀತಿಯನ್ನು ಜಾರಿ ಮಾಡಿದರು. ಹಣಕಾಸು ಸಹಾಯ ಸೇರಿದಂತೆ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು. 
 
ಕಬ್ಬು ಬೆಳೆಗಾರರ ಅನೇಕ ದೂರುಗಳಲ್ಲಿ ಕಾರ್ಖಾನೆಗಳಲ್ಲಿ ಸರಿಯಾಗಿ ತೂಕ ಮಾಡುತ್ತಿಲ್ಲ ಎಂಬುದು ಮುಖ್ಯವಾಗಿದೆ. ರಿಕವರಿ ಸೇರಿದಂತೆ ಅನೇಕ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈಗಾಗಲೇ ಸಮಿತಿ ರಚನೆ ಮಾಡಿದ್ದಾರೆ. ಆ ಸಮಿತಿ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದರು. ಕಬ್ಬಿನ ಸಮಸ್ಯೆ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಿದೆ ಎಂದು ವಿವರಿಸಿದರು.
 
ಮುಖ್ಯಮಂತ್ರಿ ಡಿಕೆಶಿ ಅವರ ಬುಡ ಅಲ್ಲಾಡುತ್ತಿದೆ. ಅವರದೇ ಶಾಸಕರು ದಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ. ಹತಾಶರಾಗಿ ಪದೇ ಪದೇ ಕೇಂದ್ರ ಸರ್ಕಾರ ದೂರುತ್ತಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಬರವನ್ನೂ ಸರಿಯಾಗಿ ನಿರ್ವಹಿಸಲಿಲ್ಲ. ಅಭಿವೃದ್ಧಿ ಸಹ ಇಲ್ಲವಾಗಿದೆ. ಎಲ್ಲಕ್ಕು ಪ್ರತಿಭಟನೆ ನಡೆಯುತ್ತಿವೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಕೇಂದ್ರ ದೂರುತ್ತಾರೆ. ಕೇಂದ್ರಕ್ಕೆ ನಿಯೋಗ ಹೋಗುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
 
ಬಸವನಗೌಡ ಪಾಟೀಲ್ ಅವರೊಂದಿಗಿನ ಭೇಟಿ ಅನಿರೀಕ್ಷಿತವಾಗಿ ನಡೆಯಿತು. ಖಾಸಗಿ ಕಾರ್ಯಕ್ರಮದಲ್ಲಿ ಸಿಕ್ಕರು. ಮುಂದೆ ಏನಾಗಲಿದೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
ಬಿಜೆಪಿ ಈಗ ವಿರೋಧ ಪಕ್ಷದಲ್ಲಿ ದೆ. ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಇಟ್ಟಿದ್ದಾರೆ. ಇನ್ನೂ ಉಳಿದ ಅವಧಿಗೂ ವಿರೋಧ ಪಕ್ಷದಲ್ಲಿ ಇರ್ತೆವೆ‌. ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಿ ಸಿಎಂ ಬೀಳಿಸುವ ಅಗತ್ಯ ಇಲ್ಲ. ಮೂರನೇ ಸಿಎಂ ಬಗ್ಗೆ ಸದ್ಯದಲ್ಲೇ ತಿಳಿಯಲಿದೆ ಎಂದರು.
 

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತುಳಸಿ ಮಾಲೆ ಹಾಕಬಾರದು… ಕಾನ್ವೆಂಟ್ ಶಾಲೆಯ ವಿರುದ್ಧ ಆಕ್ರೋಶ Video

ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಜೀವವನ್ನೇ ಉಳಿಸಿದ: ರೋಚಕ ವಿಡಿಯೋ ಇಲ್ಲಿದೆ Video

ಸಫಾರಿ ವೇಳೆ ಫೋಟೋ ತೆಗೀಬೇಕು ನಿಂತಿದ್ದವರ ಎದೆ ನಡುಗಿಸಿದ ಹುಲಿ: ಶಾಕಿಂಗ್ Video

ಸಿಜೆಪಿ ನಾಯಕರಿಗೆ ಲಾಕ್… ಸೌರವ್ ದಾಸ್, ಆಶುತೋಷ್ ರಂಕಾ ಬಂಧನ ವಿಸ್ತರಣೆಯಾಗಿದ್ದು ಇದೇ ಕಾರಣಕ್ಕೆ

ಮತಾಂತರವಾಗು, ನಮಾಜ್ ಮಾಡು.. ಇಲ್ಲಾಂದ್ರೆ ಕೆರಿಯರ್ ಮುಗಿಸಿಬಿಡ್ತೀನಿ: ವಿದ್ಯಾರ್ಥಿಗಳಿಗೆ ಪ್ರೊಫೆಸರ್ ನಿಂದಲೇ ಬೆದರಿಕೆ

ಮುಂದಿನ ಸುದ್ದಿ
Show comments