ನಮ್ಮ ಬಿಬಿಎಂಪಿ ಏನೇ ಕೆಲಸ ಮಾಡಿದ್ರೂ ಅದರ ಜೊತೆಗೆ ಒಂದಲ್ಲಾ ಒಂದು ಎಡವಟ್ಟನ್ನಾದ್ರೂ ಮಾಡಲೇಬೇಕು. ಇಲ್ಲಾಂದ್ರೆ ತಿಂದಿರೋ ಅನ್ನ ಅರಗೋದಿಲ್ಲ ಅನ್ಸುತ್ತೆ. ಡಾಂಬರ್ ಹಾಕಿದ್ರೆ ಎರಡೇ ದಿನಕ್ಕೆ ಕಿತ್ತು ಬರುತ್ತೆ, ಹೊಸ ಲೈಟ್ ಹಾಕಿದ್ರೆ ಎರಡೇ ದಿನಕ್ಕೆ ಹಾಳಾಗುತ್ತೆ, ಸಾಫ್ಟ್‌ವೇರ್ ಲಾಂಚ್ ಮಾಡಿದ್ರೆ ಕೆಲವೇ ಘಂಟೆಗಳಲ್ಲೇ ಕ್ರಾಶ್ ಆಗುತ್ತೆ. ಹೀಗೆ ಅದರ ಪಟ್ಟಿ ಮುಂದುವರೆಯುತ್ತಾ ಹೋಗುತ್ತೆ.
ಖಂಡಿತವಾಗಿಯೂ ಬಿಬಿಎಂಪಿ ಈ ನಿಯಮವನ್ನೇ ಪಾಲಿಸಿ ಕಾರ್ಯ ನಿರ್ವಹಿಸುತ್ತಿದೆ. 10 ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ರೂ ಇಂದಿಗೂ ಓಕಳಿಪುರಂ ಫ್ಲೈಓವರ್ ಲೋಕಾರ್ಪಣೆ ಆಗಿಲ್ಲ. ಆದ್ರೆ, ಓಕಳಿಪುರಂ ಫ್ಲೈಓವರ್ ಪಕ್ಕಲ್ಲೇ ನಿರ್ಮಿಸಿರೋ ಲೂ,ಲೂ ಮಾಲ್ ಗೆ ಹೆಲ್ಪ್ ಮಾಡೋದಕ್ಕೆ ನಿರ್ಮಿಸಿರೋ ಫ್ಲೈಓವರ್ ಲೋಕಾರ್ಪಣೆಗೆ ಸಿದ್ದವಾಗಿದೆ. 350 ಕೋಟಿಯ ಮೇಜರ್ ಪ್ರಾಜೆಕ್ಟ್ ಆಗಿರೋ ಓಕಳಿಪುರಂ ಫ್ಲೈಓವರ್ ಮುಗಿಯೋ ಮೊದಲೇ 35 ಕೋಟಿ ಪೂರಕ ಫ್ಲೈಓವರ್ ಕೆಲಸ ಮುಗಿದುಹೋಗಿದೆ,