Webdunia - Bharat's app for daily news and videos

Install App

'ಭುಜಂಗ' ಚಿತ್ರೀಕರಣ ವೇಳೆ ಹಗ್ಗ ತುಂಡಾಗಿ ಕೆಳ ಬಿದ್ದ ಬುಲೆಟ್ ಪ್ರಕಾಶ್

Webdunia
ಮಂಗಳವಾರ, 26 ಮೇ 2015 (11:23 IST)
ಭುಜಂಗ ಚಿತ್ರದ ಚಿತ್ರೀಕರಣ ವೇಳೆ ದ್ವಿಚಕ್ರ ವಾಹನಕ್ಕೆ ಕಟ್ಟಿದ್ದ ಹಗ್ಗ ತುಂಡಾದ ಕಾರಣ ಸ್ಯಾಂಡಲ್‌ವುಡ್ ಚಿತ್ರರಂಗದ ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. 
 
ಹೌದು, ಭುಜಂಗ ಚಿತ್ರದ ಚಿತ್ರೀಕರಣ ಜಿಲ್ಲೆಯ ವರುಣಾ ನಗರದಲ್ಲಿ ನಡೆಯುತ್ತಿತ್ತು. ಈ ವೇಳೆ ದ್ವಿ ಚಕ್ರ ವಾಹನವೊಂದಕ್ಕೆ ಹಗ್ಗ ಕಟ್ಟಿ ಹಾರಿಸುವ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಚಿತ್ರಣದಲ್ಲಿ ಬುಲೆಟ್ ಪ್ರಕಾಶ್ ಪ್ರಮುಖ ಪಾತ್ರಧಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಕುಳಿತು ನಟಿಸುತ್ತಿದ್ದರು. ಆದರೆ ಈ ವೇಳೆ ಹಗ್ಗ ಕಡಿದುಕೊಂಡು ಕೆಳ ಬೀಳುತ್ತಿದ್ದರು. ಇದನ್ನು ಕಂಡ ಚಿತ್ರ ತಂಡದ ಇತರರು ಕೂಡಲೇ ಬಳಿ ಧಾವಿಸಿ ಪ್ರಕಾಶ್ ಅವರನ್ನು ರಕ್ಷಿಸಿದ್ದಾರೆ.
 
ಇನ್ನು ಸ್ವಲ್ಪ ಮಟ್ಟಿನ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಪ್ರಸ್ತುತ ವಿಶ್ರಾಂತಿಯಲ್ಲಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಪ್ರಕಾಶ್ ಇಂದೇ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಲು ತಿಳಿಸಿವೆ.  
 
ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಪ್ರಮುಖ ಪಾತ್ರಧಾರಿಯಾಗಿದ್ದು, ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments