ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಟ್ಟಡ ಕುಸಿತಉಂಟಾಗಿದೆ.ಮಳೆಯಿಂದಾಗಿ ಶಿಥಿಲಗೊಂಡಿದ್ದ ಮೇಲ್ಛಾವಣಿ ಮತ್ತು 50 ವರ್ಷಗಳ ಹಿಂದಿನ ಹಳೆಯ ಕನ್ನಡ ಗ್ರಂಥಾಲಯದ ಮೇಲ್ಛಾವಣಿ ಕುಸಿದಿದೆ.ಸಾಕಷ್ಟು ವರ್ಷಗಳಿಂದ ಸಮಸ್ಯೆಗಳಿಂದ ತುಂಬಿತುಳುಕುತ್ತಿರುವ ಕನ್ನಡ ಅಧ್ಯಯನ ಸಂಸ್ಥೆಯ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.ಹೀಗಾಗಿ ರಿಜಿಸ್ಟರ್ ಶಿವಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡಿದ್ದಾರೆ.ಅಷ್ಟೇ ಅಲ್ಲದೇ ಈಗ ಎಚ್ಚರ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ತೀವ್ರವಾಗಲಿದೆ.
ಇನ್ನು ಇಲ್ಲಿ ಶೌಚಾಲಯ ಕೊರತೆ, ಕುಡಿಯುವ ನೀರಿನ ಸಮಸ್ಯೆಯಿಂದ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.ಹೀಗಾಗಿ ವಿದ್ಯಾರ್ಥಿಗಳ ಮುಂದೆ ಮೈಸೂರು ವಿವಿಯ ರಿಜಿಸ್ಟರ್ ಶಿವಪ್ಪ ಕಕ್ಕಾಬಿಕ್ಕಿಯಾಗಿದ್ದಾರೆ.ನೊಂದ ವಿದ್ಯಾರ್ಥಿಗಳಂತೂ