Select Your Language

Notifications

webdunia
webdunia
webdunia
webdunia

ಆಯವ್ಯಯವು ದೂರದೃಷ್ಟಿಯುಳ್ಳದ್ದು: ಮೋದಿ

ಆಯವ್ಯಯವು ದೂರದೃಷ್ಟಿಯುಳ್ಳದ್ದು: ಮೋದಿ
ನವದೆಹಲಿ , ಶನಿವಾರ, 28 ಫೆಬ್ರವರಿ 2015 (14:34 IST)
ಇಂದು ಅಧಿವೇಶನದಲ್ಲಿ ಮಂಡನೆಯಾದ 2015-16ನೇ ಸಾಲಿನ ಆಯವ್ಯಯವದ ಮಂಡನೆಯು ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಇದು ಪ್ರಾಯೋಗಾತ್ಮಕ, ಸಕಾರಾತ್ಮಕ, ಪ್ರಗತೀಪರ ಹಾಗೂ ದೂರದೃಷ್ಟಿಯುಳ್ಳದ್ದು ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. 
 
 
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಆಯವ್ಯಯವನ್ನು ಪ್ರಮುಖವಾಗಿ ರೈತರು, ಬಡವರು, ಮಧ್ಯಮ ವರ್ಗದವರು ಹಾಗೂ ಹಿರಿಯ ನಾಗರೀಕರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಈ ಆಯವ್ಯಯವು ರಾಷ್ಟ್ರದ ಬೆಳವಣಿಗೆ, ಗುಣಮಟ್ಟತೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ ಎಂದಿದ್ದಾರೆ. 
 
ಆಯವ್ಯಯವು ತೆರಿಗೆಗೆ ಸಂಬಂಧಿಸಿದ ಎಲ್ಲಾ ಅನುಮಾನಗಳನ್ನು ತೊಡೆದುಹಾಕಲು ಪೂರವಾಗಿದ್ದು, ಸ್ನೇಹಯುತವಾಗಿ ಮಂಡಿಸಲಾಗಿದೆ. ಇದು ಹೂಡಿಕೆದಾರರಲ್ಲಿ ಸ್ಥಿರತೆ ಸಾಧಿಸುತ್ತದೆ. ಅಲ್ಲದೆ ಒಳ್ಳೆಯ ತೆರಿಗೆ ವ್ಯವಸ್ಥೆಯ ಮೂಲಕ ಭರವಸೆಯನ್ನು ಮೂಡಿಸಿದೆ ಎಂದರು. 
 
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2022ರಲ್ಲಿ ಸಾಧಿಸಬೇಕಾದ ಎಲ್ಲಾ ಗುರಿಗಳನ್ನು ಆಯವ್ಯಯದಲ್ಲಿ ಅಳವಡಿಸಿದ್ದಾರೆ.
 
ಗೃಹ ಸಾಲದಿಂದ ಹಿಡಿದು ಉದ್ಯೋಗ, ಆರೋಗ್ಯ, ಶಿಕ್ಷಣ ಹಾಗೂ ವಿದ್ಯುದೀಕರಣ ಸೇರಿದಂತೆ ಎಲ್ಲವನ್ನೂ ಪರಿಗಣಿಸಲಾಗಿದೆ. 2022ರ ವೇಳೆಗೆ ಸಾಧಿಸಬೇಕಾಗಿರುವ ಎಲ್ಲಾ ಗುರಿಗಳನ್ನು ಎಫ್ಎಂ ನಲ್ಲಿ ಭಾರತದ ಹಿಂದೂ ಮಹೋತ್ಸವದಂದು ಪ್ರಸಾರ ಮಾಡಲಾಗಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 
 
ದೇಶದ ಎಲ್ಲಾ ರಾಜ್ಯಗಳ ಸಮಸ್ಯೆಗಳನ್ನು, ಆಸೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿರುವ ಜೇಟ್ಲಿ ರಾಷ್ಟ್ರ ಮಟ್ಟದಲ್ಲಿಯೂ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸಿದ ಜೋಟ್ಲಿಗೆ ನನ್ನ ಅಭಿನಂದನೆ ಎಂದಿದ್ದಾರೆ.

Share this Story:

Follow Webdunia kannada