Select Your Language

Notifications

webdunia
webdunia
webdunia
webdunia

ಇದೊಂದು ಅಭಿವೃದ್ಧಿಗೆ ಪೂರಕವಾದ ಬಜೆಟ್: ಶೆಟ್ಟರ್

ಇದೊಂದು ಅಭಿವೃದ್ಧಿಗೆ ಪೂರಕವಾದ ಬಜೆಟ್: ಶೆಟ್ಟರ್
ಬೆಂಗಳೂರು , ಶನಿವಾರ, 28 ಫೆಬ್ರವರಿ 2015 (14:30 IST)
ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವರು ಮಂಡಿಸಿದ 2015-16ನೇ ಸಾಲಿನ ಆಯವ್ಯಯದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ದೂರ ದೃಷ್ಟಿಯಿಂದ ರೈತರ ಹಾಗೂ ಬಡವರ ಪರವಾಗಿ ಆಯವ್ಯಯವನ್ನು ಮಂಡಿಸಲಾಗಿದ್ದು, ಅಭವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. 
 
ನ್ನುಮಾಧ್ಯಗಳಿಗಳೊಂದಿಗೆ ಮಾತನಾಡಿದ ಅವರು, ಹಲವು ವಿಶೇಷ ಯೋಜನೆಗಳನ್ನು ಘೋಷಿಸಿದ್ದು, ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಮಂಡಿಸಿದ್ದಾರೆ. ಪ್ರಮುಖವಾಗಿ ರೈತರು ಹಾಗೂ ಬಡವರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ನಲ್ಲಿ ವಸ್ತುಗಳ ಉತ್ಪಾದನೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಇಧು ನಮಗೆ ತೃಪ್ತಿ ತಂದಿದೆ  ಎಂದಿದ್ದಾರೆ. 
 
ಇನ್ನು ಬೆಂಗಳೂರು ದಕ್ಷಿಣ ಸಂಸದ ಕೇಂದ್ರ ಸಚಿವ ಅನಂತ ಕುಮಾರ್ ಮಾತನಾಡಿದ್ದು, ಕೇಂದ್ರದ ಇಂದಿನ ಬಜೆಟ್‌ನಲ್ಲಿ ಸಾಮಾಜಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜೀವ ವಿಮೆ, ಆರೋಗ್ಯ ವಿಮೆಗೆ ಆದ್ಯತೆ ನೀಡಲಾಗಿದೆ. ಇದರಿಂದ ಬಡವರಿಗೆ ಉತ್ತಮ ಸದಾವಕಾಶ ದೊರೆತಿದ್ದು, ಜೀವನಾಂಶಕ್ಕೆ ನಾಂದಿಯಾಗಲಿದೆ. ಅಲ್ಲದೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 70 ಸಾವಿರ ಕೋಟಿ ಆದ್ಯತೆ ನೀಡಲಾಗಿದೆ. ಅಂತೆಯೇ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ 40 ಸಾವಿರ ಕೋಟಿ ಮೀಸಲಿಟ್ಟಿದ್ದು, ಗ್ರಾಮೀಣಾಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಆದ್ದರಿಂದ ಈ ಆಯವ್ಯಯವು ಎಲ್ಲರಿಗೂ ಉತ್ತಮವಾಗಿದ್ದು ಅಭಿವೃದ್ಧಿಗೆ ಪೂರಕವಾಗಿದೆ ಎಂದರು. 

Share this Story:

Follow Webdunia kannada