10 ವರ್ಷಗಳಿಂದ ಒಂದು ಕುಟುಂಬವನ್ನು ಬಹಿಷ್ಕರಿಸಲಾಗಿತ್ತು. ಎಚ್ಚೆತ್ತ ತಹಶೀಲ್ದಾರ್ ಉದಯ್ ಕುಮಾರ್ ಹಾರವಾಡ ಗ್ರಾಮಕ್ಕೆ ತೆರಳಿ ಕೂಡಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಸಂಧಾನ ಸಭೆ ನಡೆಸೋದಾಗಿ ಹೇಳಿದ್ರು. ಹಾರವಾಡ ಗ್ರಾಮದಲ್ಲಿ ಬಂಟಾ ಗೌಡ ಕುಟುಂಬಕ್ಕೆ ಕಳೆದ 10 ವರ್ಷಗಳಿಂದ ಬಹಿಷ್ಕಾರ ಹೇರಲಾಗಿತ್ತು. ಬಂಟಾ ಗೌಡನ ಮಗನ ಮದುವೆಗೆ ಊರ ಗೌಡನನ್ನು ಕರೆದಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರ ಹೇರಲಾಗಿತ್ತು. ಆನಂದ ಗೌಡ ಮತ್ತು ಬಂಟಾ ಗೌಡ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕುಟುಂಬ ಕಲಹದಿಂದಾಗಿ ಆನಂದ ಗೌಡನನ್ನು ಮದುವೆಗೆ ಕರೆದಿರಲಿಲ್ಲ. ಇದರಿಂದಾಗಿ ಬಂಟಾ ಗೌಡ ಕುಟುಂಬವನ್ನು ಬಹಿಷ್ಕರಿಸಲಾಗಿದ್ದು, ಇವರ ಜತೆ ಯಾರಾದರೂ ಮಾತನಾಡಿದರೆ 1000 ರೂ.ದಂಡ ವಿಧಿಸಲಾಗ್ತಿತ್ತು. ಕುಡಿಯಲು ನೀರು ಕೊಡುತ್ತಿರಲಿಲ್ಲ ಹಾಗೂ ಅಂಗಡಿಗೆ ತೆರಳುವಂತಿರಲಿಲ್ಲ. ಕುಟುಂಬನ್ನು ಬಹಿಷ್ಕರಿಸಿದ್ದರಿಂದ ಬಂಟಾ ಗೌಡ ಕುಟುಂಬದ ಇಬ್ಬರು ಮಕ್ಕಳಿಗೆ ಇನ್ನೂ ಮದುವೆಯಾಗಿಲ್ಲ. ಇದೀಗ ಬಂಟಾ ಗೌಡ ಕುಟುಂಬಕ್ಕೆ ನ್ಯಾಯ ದೊರೆತಿದ್ದು, ಬಂಟ ಗೌಡ ಕುಟುಂಬ ನಿಟ್ಟುಸಿರು ಬಿಡುವಂತಾಗಿದೆ.