ಸಿಎಂ ಆಗುವ ಬಗ್ಗೆ ಬೊಮ್ಮಾಯಿಗೆ ಸಿಹಿ ಸುದ್ದಿ ನೀಡಿದ್ದು ಇವರು..!

Webdunia
ಗುರುವಾರ, 29 ಜುಲೈ 2021 (08:21 IST)
ಬೆಂಗಳೂರು (ಜು.29): ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ರಾಜ್ಯ ಬಿಜೆಪಿ ಉಸ್ತುವಾರಿ  ಅರುಣ್ ಸಿಂಗ್ ಅವರು ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದಾಗಲೇ ಅವರಿಗೆ ತಾವು ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಮಾಹಿತಿ ಖಚಿತವಾಗಿತ್ತು.

•ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ಕೇಳಿದ್ದ ಅರುಣ್ ಸಿಂಗ್
•ಕೇಳಿದಾಗಲೇ ಬೊಮ್ಮಾಯಿಗೆ ತಾವು ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಮಾಹಿತಿ

ಮಂಗಳವಾರ ಮಧ್ಯಾಹ್ನ ವೀಕ್ಷಕರಾಗಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕುಮಾರ ಕೃಪ ಅತಿಥಿಗೃಹದಲ್ಲಿ ಕುಳಿತು ದೆಹಲಿಯಿಂದ ಹೈ ಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ ಯಾರು ಮುಖ್ಯಮಂತ್ರಿಯಾಗಬಹುದು ಎಂಬುದರ ಬಗ್ಗೆ ಅವರಿಗೂ ಅಧಿಕೃತ ಮಾಹಿತಿ ಇರಲಿಲ್ಲ.
ದೃಶ್ಯ ಮಾಧ್ಯಮಗಳಲ್ಲಿ ಅರವಿಂದ್ ಬೆಲ್ಲದ, ಮುರುಗೇಶ್ ನಿರಾಣಿ, ಬಸವರಾಜ  ಬೊಮ್ಮಾಯಿ  ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು, ಈ ನಡುವೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹಂಗಾಮಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದರೂ ಪ್ರಧಾನಿ ತೆರಳಲಿಲ್ಲ.
ಸಂಜೆ ಶಾಸಕಾಂಗ ಸಭೆಗೂ ಕೆಲ ಗೊತ್ತು ಮುಂಚೆ ಧರ್ಮೇಂದ್ರ ಪ್ರಧಾನ್ ಅವರಿಗೆ ಹೈ ಕಮಾಂಡ್ನಿಂದ ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂಬ ಸಂದೇಶ ಬಂತು ಬಳಿಕ ಅರುಣ್ ಸಿಂಗ್ ಅವರು ಸಭೆ ಆರಂಭವಾಗುವ ಮೊದಲು ಬೊಮ್ಮಾಯಿ ಅವರ ಬಳಿ ಬಂದು ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ನಗುತ್ತ ಪ್ರಶ್ನಿಸಿದ್ದರು. ಇದರಿಂದ  ಗೊಂದಲಕ್ಕೆ ಈಡಾದ ಬೊಮ್ಮಾಯಿ ಅಚ್ಚರಿಯಿಂದ  ಸಿಂಗ್ ನೋಡಿದರು. ಆಗ ನೀವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಲ್ಲ ಅದಕ್ಕೆ ಎಂದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಆಡಳಿತದಲ್ಲಿ ನಕ್ಸಲಸಿಂ ಕೊನೆಯುಸಿರೆಳೆಯುತ್ತಿದೆ: ಅಮಿತ್ ಶಾ

ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ: ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಅಂದಿದ್ದು

ದೋಣಿಯೊಳಗೆ ಹಾರಿ ಬಂದು ದೊಡ್ಡ ಮೀನು ಚುಚ್ಚಿ ಮೀನುಗಾರಿಕೆಗೆ ತೆರಳಿದ್ದ ಯುವಕ ಸಾವು

ಒನ್ ಸೈಡ್ ಲವ್‌ಗೆ ನೋ ಎಂದ ವಿದ್ಯಾರ್ಥಿನಿಯನ್ನೇ ಮುಗಿಸಿದ ಪ್ರಿಯಕರ

ಆರ್‌ಎಸ್‌ಎಸ್‌ ದೊಡ್ಡ ವೃಕ್ಷವಾಗಿದ್ದು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ: ಶೋಭ ಕರಂದ್ಲಾಜೆ

ಮುಂದಿನ ಸುದ್ದಿ
Show comments