Select Your Language

Notifications

webdunia
webdunia
webdunia
webdunia

ಬ್ಲ್ಯಾಕ್ ಅಂಡ್ ವೈಟ್ ದಂಧೆ: ಆರ್‌‌ಬಿಐ ಅಧಿಕಾರಿ ಕೆ. ಮೈಕಲ್ ಅರೆಸ್ಟ್

ಬ್ಲ್ಯಾಕ್ ಅಂಡ್ ವೈಟ್ ದಂಧೆ: ಆರ್‌‌ಬಿಐ ಅಧಿಕಾರಿ ಕೆ. ಮೈಕಲ್ ಅರೆಸ್ಟ್
ಬೆಂಗಳೂರು , ಮಂಗಳವಾರ, 13 ಡಿಸೆಂಬರ್ 2016 (15:13 IST)
ಬ್ಲ್ಯಾಕ್ ಆಂಡ್ ವೈಟ್ ದಂಧೆ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಆರ್‌ಬಿಐನ ಹಿರಿಯ ವಿಶೇಷಾಧಿಕಾರಿವನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
 
ಬಂಧಿತ ಅಧಿಕಾರಿ ಕೆ.ಮೈಕಲ್ ಬೆಂಗಳೂರಿನ ಆರ್‌ಬಿಐ ಕಚೇರಿಯಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಧಿಕಾರಿಗಳೊಂದಿಗೆ ಸೇರಿ 1.5 ಕೋಟಿ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿರುವ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 
 
ಕೊಳ್ಳೆಗಾಲದ ಮೈಸೂರು ಬ್ಯಾಂಕ್‌ನ ಕ್ಯಾಶಿಯರ್ ಜೊತೆ ಸೇರಿ 1.5 ಕೋಟಿ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿರುವ ಆರೋಪ ಆರ್‌ಬಿಐನ ಹಿರಿಯ ವಿಶೇಷಾಧಿಕಾರಿ ಕೆ.ಮೈಕಲ್ ವಿರುದ್ಧ ಕೇಳಿ ಬಂದಿದೆ. 
 
ಈ ಘಟನೆಯ ಹಿನ್ನೆಲೆಯಲ್ಲಿ ಡಿಸೆಂಬರ್ 7 ರಂದು ಸಿಬಿಐ ಅಧಿಕಾರಿಗಳು ಕೊಳ್ಳೆಗಾಲದ ಮೈಸೂರು ಬ್ಯಾಂಕ್ ಶಾಖೆಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಬಾಲೆ ಮೇಲೆ 6 ತಿಂಗಳು ಸಾಮೂಹಿಕ ಅತ್ಯಾಚಾರ