ಹಾಲಿನ ದರ ಮತ್ತೆ ಏರಿಕೆ, ನೀವು ಸಿದ್ದರಾಮಯ್ಯ ಅಲ್ಲ ಕತ್ತರಿ ರಾಮಯ್ಯ ಎಂದ ಬಿಜೆಪಿ

Krishnaveni K
ಶನಿವಾರ, 19 ಅಕ್ಟೋಬರ್ 2024 (09:45 IST)
ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ನೀವು ಸಿದ್ದರಾಮಯ್ಯ ಅಲ್ಲ ಜನರ ಜೇಬಿಗೆ ಕತ್ತರಿ ಹಾಕುವ ಕತ್ತರಿ ರಾಮಯ್ಯ ಎಂದಿದೆ.

ಲೋಕಸಭೆ ಚುನಾವಣೆ ಮುಗಿದ ಬಳಿಕ ನಂದಿನಿ ಹಾಲಿನ ದರ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಡೀಸೆಲ್, ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕಲಾಗಿತ್ತು. ಇದೀಗ ಮತ್ತೊಮ್ಮೆ ರೈತರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ಮುಂದಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನರನ್ನು ಸಂಕಷ್ಟಗಳ ಕೂಪಕ್ಕೆ ತಳ್ಳಿರುವ ಸಿದ್ದರಾಮಯ್ಯನವರೇ, ತಮ್ಮ ಹೆಸರನ್ನು ಕತ್ತರಿರಾಮಯ್ಯ ಎಂದು ಬದಲಾಯಿಸಿಕೊಳ್ಳುವುದು ಒಳಿತು. ಮತ್ತೆ ಹಾಲಿನ ದರ ಏರಿಕೆಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಕೆಲವೇ ದಿನಗಳ ಮೊದಲು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹಾಲಿನ ದರ ಏರಿಕೆ ಮಾಡುವುದಾಗಿ ಘೋಷಿಸಿದ್ದರು. ನಾವು ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರಿಗೆ ರೈತರಿಗೆ ಒಳ್ಳೆಯಾಗುವುದು ಬೇಕಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಎಪಿ ಆಡಳಿತವಿರುವ ಪಂಜಾಬ್ ನಲ್ಲೂ ಪೇಪರ್ ಲೀಕ್ ಆಗಿದೆ, ಏನಂತೀರಿ ಎಂದಿದ್ದಕ್ಕೆ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ ನೋಡಿ ಟ್ರೋಲ್

ಸರಿಯಾಗೇ ಆಯ್ತು.. ಅಪ್ಪನ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟ ಯುವಕ: ಆದ್ರೆ ಆಕೆ ಮಾಡಿದ್ದೇನು Video

ಜೆನ್ ಜಿ ಯುವಕರ ಸೆಳೆಯಲು ಸಂಪುಟ ಸಹೋದ್ಯೋಗಿಗಳಿಗೆ ಕ್ರೇಜಿ ಐಡಿಯಾ ಕೊಟ್ಟ ಪ್ರಧಾನಿ ಮೋದಿ

ಮಹಿಳೆಯರು ಅಂತ ಸೀಟು ಬಿಟ್ಟುಕೊಡ್ಬೇಕಾ... ಮೆಟ್ರೋ ರೈಲಿನಲ್ಲಿ ನಡೆದ ಈ ಘಟನೆ ವಿಡಿಯೋ ತಪ್ಪದೇ ನೋಡಿ Video

Karnataka Weather: ಇಂದು ಯಾವ ಜಿಲ್ಲೆಗೆ ಭಾರೀ ಮಳೆ, ಯಾವ ಜಿಲ್ಲೆಗೆ ಸಾಧಾರಣ ಮಳೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments