Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ನಿವಾಸದ ಮೇಲೆ ಬಿಜೆಪಿ ಪ್ರತಿಭಟನೆ ವಿಚಾರ: ಎರಡನೇ ಬಾರಿಗೆ ಮುಂದೂಡಿಕೆ

ಸಿದ್ದರಾಮಯ್ಯ ನಿವಾಸದ ಮೇಲೆ ಬಿಜೆಪಿ ಪ್ರತಿಭಟನೆ ವಿಚಾರ: ಎರಡನೇ ಬಾರಿಗೆ ಮುಂದೂಡಿಕೆ
ಬೆಂಗಳೂರು , ಮಂಗಳವಾರ, 27 ಜನವರಿ 2015 (14:06 IST)
ಕಾಂಗ್ರೆಸ್ ಶಾಸಕ ಮುನಿರತ್ನ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ನಿವಾಸದ ಮೇಲೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವಲ್ಲಿ ಬಿಜೆಪಿಯ ಸದಸ್ಯರು ದಿನದಿಂದ ದಿನಕ್ಕೆ ಮಂಕಾಗುತ್ತಿದ್ದು, ಪ್ರತಿಭಟನೆಯನ್ನು ಎರಡನೇ ಭಾರಿಗೆ ಮುಂದೂಡಿದ್ದಾರೆ.  
 
ನಗರದ ರಾಜರಾಜೇಶ್ವರಿ ನಗರದ 6 ವಾರ್ಡ್‌ಗಳಲ್ಲಿ ನಡೆದಿದ್ದ ಬಿಬಿಎಂಪಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು ಇದ್ದಕ್ಕಿದ್ದಂತೆ ಮಾಯವಾಗಿದ್ದವು. ಕಾಮಗಾರಿಗಳು ಕಳಪೆಯಿಂದ ಕೂಡಿವೆ, ಅಲ್ಲದೆ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆಱೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿತ್ತು. ತನಿಖೆ ವೇಳೆಯಲ್ಲಿ ಕಡತಗಳು ಅಗತ್ಯವಾದ ಕಾರಣ ಕಡತಗಳನ್ನು ನೋಡಲು ಅಧಿಕಾರಿಗಳು ಬಯಸಿದ್ದರು. ಆದರೆ ಆ ಕಡತಗಳು ಮಾಯವಾಗಿದ್ದವು. 
 
ಕಳವಾಗಿದ್ದ ಆ ಎಲ್ಲಾ ಕಡತಗಳೂ ಕೂಡ ಶಾಸಕ ಮುನಿರಾಜು ಅವರ ಮನೆಯಲ್ಲಿ ದೊರಕಿದ್ದವು. ಬಳಿಕ ಪ್ರಕರಣದಲ್ಲಿ ಅವರೇ ಭಾಗಿಯಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ತನಿಖೆಗೆ ಆದೇಶಿಸಬೇಕೆಂದು ಬಿಬಿಎಂಪಿಯ ಬಿಜೆಪಿ ಸದಸ್ಯರು ಹಾಗೂ ಕಾರಪೊರೇಟರ್‌ಗಳು ಪಟ್ಟು ಹಿಡಿದಿದ್ದರು. ಆದರೂ ಸರ್ಕಾರ ಆ ವಿಷಯದತ್ತ ಗಮನ ಹರಿಸದೆ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಸಕ್ತಿ ತೋರಲಿಲ್ಲ. ಅಲ್ಲದೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ತಂಡದ ಮುಖ್ಯಸ್ಥ ಮಹೇಶ್ ಎಂಬ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತು. ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು, ಸರ್ಕಾರದ ನಿರ್ಧಾರವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಮುತ್ತಿಗೆ ಹಾಕುವುದಾಗಿ ಘೋಷಿಸಿತ್ತು. ಆದರೆ ಪ್ರತಿಭಟನೆಗೆ ಹಲವಾರು ವಿಘ್ನಗಳೆದುರಾಗುತ್ತಿದ್ದು, ಪ್ರತಿಭಟನೆ ಕೈಗೊಳ್ಳಲು ಸದಸ್ಯರಲ್ಲಿಯೇ ಸಹಮತ ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿಯೇ ಪ್ರತಿಭಟನೆಯನ್ನು ಮುಂದೂಡಲಾಗುತ್ತಿದೆ ಎನ್ನಲಾಗಿದೆ. 
 
ಇನ್ನು ಬಿಜೆಪಿ ಪ್ರತಿಭಟನೆಯನ್ನು ನಡೆಸುವುದಾಗಿ ಜ.19ರಂದು ಘೋಷಿಸಿತ್ತು. ಅಂದು ಪ್ರತಿಭಟನೆಗೆ ಸದಸ್ಯರ ಒಗ್ಗೂಡಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಖಂಡಿತವೂಗಿಯೂ ಜ.27ರಂದು ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತ್ತು. ಆದರೆ ಇಂದೂ ಕೂಡ ಸಾಧ್ಯವಾಗದ ಕಾರಣ ಮತ್ತೆ ಎರಡನೇ ಭಾರಿಗೆ ಮುಂದೂಡಲಾಗಿದೆ. 
 
ಈ ಮುಂದೂಡಿಕೆಗೆ ಬಿಜೆಪಿಯಲ್ಲಿನ ಮಾಜಿ ಸಚಿವರೋರ್ವರು ಕಾರಣವಾಗಿದ್ದು, ಮುನಿರತ್ನ ವಿರುದ್ಧ ಪ್ರತಿಭಟನೆ ನಡೆಸಲು ಒಪ್ಪಿಗೆ ಸೂಚಿಸುತ್ತಿಲ್ಲ ಎನ್ನಲಾಗಿದ್ದು, ಮುಂದೂಡಿಕೆಗೆ ಅವರೇ ಕಾರಣ ಎಂದು ಹೇಳಲಾಗುತ್ತಿದೆ.  

Share this Story:

Follow Webdunia kannada