Webdunia - Bharat's app for daily news and videos

Install App

ಕಲಬುರಗಿ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ: ಪ್ರಹ್ಲಾದ್ ಜೋಷಿ

Webdunia
ಸೋಮವಾರ, 29 ಆಗಸ್ಟ್ 2016 (16:00 IST)
ಹಿರಿಯ ಸಂಶೋಧಕ ಸಾಹಿತಿ ಎಂ.ಎಂ.ಕಲಬುರಗಿ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾಗುತ್ತಿದೆ. ಆರೋಪಿಗಳೇ ಶರಣಾಗಲಿ ಎಂದು ಸರಕಾರ ಕಾಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಜಿ.ಪರಮೇಶ್ವರ್‌ಗೆ ತೊಂದರೆ ಕೊಡುತ್ತಿದ್ದಾರೆ. ಅವರನ್ನು ನಿಯಂತ್ರಣದಲ್ಲಿಡಲು ಸಿದ್ದರಾಮಯ್ಯನವರು ತಮ್ಮ ವ್ಯಕ್ತಿಯನ್ನು ಸಲಹೆಗಾರರನ್ನಾಗಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
 
ಹಿರಿಯ ಸಾಹಿತಿ ಕಲಬುರಗಿಯವರ ಹತ್ಯೆ ನಡೆದು ವರ್ಷ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ. ಕಲಬುರಗಿಯವರ ಕುಟುಂಬಕ್ಕೆ ಸಾಂತ್ವನ ಹೇಳಲು ಸರಕಾರದ ಬಳಿ ಸಮಯವಿಲ್ಲ ಎಂದು ಕಿಡಿಕಾರಿದ್ದಾರೆ.
 
ರಾಜ್ಯದಲ್ಲಿ ಅಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಾಡಹಗಲೇ ಲೂಟಿ, ದರೋಡೆ, ಅತ್ಯಾಚಾರಗಳು ನಡೆಯುತ್ತಿವೆ. ಆದಾಗ್ಯೂ ಸರಕಾರ ಅಪರಾಧಗಳನ್ನು ತಡೆಯಲು ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಗಂದೂರು ಸೇತುವೆ ಉದ್ಘಾಟನೆಗೆ ಕರೆದಿಲ್ಲ: ಮೋದಿಗೆ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ

ನೀವು ನಂ1 ಮಿನಿಸ್ಟರ್ ಅಂತ ಸುರ್ಜೇವಾಲ ನನ್ನ ಹೊಗಳಿದ್ದಾರೆ: ಜಮೀರ್ ಅಹ್ಮದ್

Gold price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

2003 ರಲ್ಲಿ ನಡೆದಿದ್ದ ಟೆಕಿ ಗಿರೀಶ್ ಹತ್ಯೆ ಕೇಸ್: ಭಾವೀ ಪತಿ ಹತ್ಯೆಗೈದಿದ್ದ ಶುಭಾ ಕೇಸ್ ಗೆ ಟ್ವಿಸ್ಟ್

ಲೋ ಬಿಪಿಯಿಂದ ಹೃದಯಾಘಾತವಾಗುವುದು ನಿಜಾನಾ: ಡಾ ಸಿಎನ್ ಮಂಜುನಾಥ್ ಹೇಳುವುದೇನು

ಮುಂದಿನ ಸುದ್ದಿ
Show comments