Webdunia - Bharat's app for daily news and videos

Install App

ಬಿಜೆಪಿಯಿಂದ ಅಲ್ಪಸಂಖ್ಯಾತ ಯುವಮೋರ್ಚಾ ಘಟಕ ಆರಂಭ

Webdunia
ಗುರುವಾರ, 2 ಜೂನ್ 2016 (19:23 IST)
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಲ್ಪಸಂಖ್ಯಾತ ಯುವಮೋರ್ಚಾ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಅಜೀಂ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಮಾಜಿ ಡಿಸಿಎಂ ಆರ್. ಆಶೋಕ್ ಮತ್ತು ಮಾಜಿ ಎಮ್‌ಎಲ್‌ಸಿ ಡಿ.ಎಸ್ ವೀರಯ್ಯ ಉಪಸ್ಥಿತರಿದ್ದರು.
 
ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಆರ್ ಅಶೋಕ್, ಸಮಾಜದಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಬೇಕು. ಅವರ ಕುಂದು ಕೊರತೆಗಳನ್ನು ಅರಿತುಕೊಳ್ಳಬೇಕು. ಮುಂಬರುವ ಚುನಾವಣೆಯಲ್ಲಿ ಜಯಭೇರಿಯಾಗಬೇಕಾದರೆ ಎಲ್ಲ ಸಮುದಾಯದ ಬೆಂಬಲವು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಇಂದು ಅಲ್ಪಸಂಖ್ಯಾತ ಯುವಮೋರ್ಚಾ ಘಟಕವನ್ನು ಸ್ಥಾಪನೆ ಮಾಡಿದೆ ಎಂದು ಹೇಳಿದರು.
 
ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಸಾಕಷ್ಟು ಗೊಂದಲದಲ್ಲಿದೆ. ಚುನಾವಣೆ ನಡೆಯಲು ಕೇವಲ 20 ತಿಂಗಳು ಬಾಕಿ ಇದೆ. ಇಗಾಗಲೇ ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆರುತ್ತದೆ. ನಮ್ಮ ಸರಕಾರದಲ್ಲಿ ಮುಸಲ್ಮಾನರು ಸಚಿವರಾಗಬೇಕು ಅವಾಗಲೇ ಪರಿಪೂರ್ಣವಾಗುತ್ತದೆ ಎಂದು ಹೇಳುತ್ತಿದ್ದಾರೆ.
 
ಬಿಜಿಪಿ ಮುಸ್ಲಿಂ ಮಿರೋಧಿ ಎಂದು ಸಾರ್ವಜನಿಕರಲ್ಲಿ ಕಾಂಗ್ರೆಸ್ ವಿಷದ ಬೀಜ ಬಿತ್ತುತ್ತಿದೆ. ಕಾಂಗ್ರೆಸ್ ಪಕ್ಷ ವೋಟಿಗಾಗಿ ಮುಸಲ್ಮಾನರ ಭೇಟೆ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮಿಳುನಾಡು, ತಂದೆ ಮಗನ ಜಗಳವನ್ನು ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ಸಬ್‌ ಇನ್‌ಸ್ಪೆಕ್ಟರ್‌

ಕೆಆರ್ ಎಸ್ ಡ್ಯಾಮ್ ಕಟ್ಟುವ ಯೋಜನೆ ಟಿಪ್ಪುಗಿತ್ತು ಎಂದ ಜಮೀರ್ ಅಹ್ಮದ್ ಗೆ ಟಾಂಗ್ ಕೊಟ್ಟ ಬಿಜೆಪಿ

ಮುಂಬೈ, ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಐವರಿಗೆ ಕಣ್ಣಿನ ಸೋಂಕು: ವೈದ್ಯರ ವಿರುದ್ಧ ಎಫ್‌ಐಆರ್‌

ಪ್ರಜ್ವಲ್ ಥರಾ ಪ್ರತಾಪ್ ಸಿಂಹ ಮೊಬೈಲ್ ನೋಡಿದ್ರೆ ಜೈಲಿಗೇ ಹಾಕ್ಬೇಕಾಗುತ್ತೆ: ಎಂ ಲಕ್ಷ್ಮಣ

ಮದರಸಾ ಗುರುಗಳಿಗೆ ಕನ್ನಡ, ಅಲ್ಪಸಂಖ್ಯಾತರ ಸಾಮೂಹಿಕ ಮದುವೆಗೆ 50000 ಕೊಡ್ತೇವೆ: ಜಮೀರ್ ಅಹ್ಮದ್

ಮುಂದಿನ ಸುದ್ದಿ
Show comments