Select Your Language

Notifications

webdunia
webdunia
webdunia
webdunia

'ಬಿಡು ನಿನ್ನ ನೀಚ ಬುದ್ದಿಯ' ದಾಸರ ಪದಕ್ಕೆ ಬಿಜೆಪಿಯವರು ಅಪವಾದ: ಉದ್ರಪ್ಪ

'ಬಿಡು ನಿನ್ನ ನೀಚ ಬುದ್ದಿಯ' ದಾಸರ ಪದಕ್ಕೆ ಬಿಜೆಪಿಯವರು ಅಪವಾದ: ಉದ್ರಪ್ಪ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2015 (16:49 IST)
ಸಂಸದೆ ಶೋಭಾ ಕರಾಂದ್ಲಾಜೆ ಅವರು ಪ್ರಧಾನಿ ಮೋದಿ ಅವರನ್ನು ವಹಿಸಿಕೊಂಡು ಸಿದ್ದರಾಮಯ್ಯ ಅವರನ್ನು ಕೂದಲಿಗೆ ಹೋಲಿಸಿ ಟೀಕಿಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಇಲ್ಲದ ಕಾರಣ ಹತಾಶರಾಗಿದ್ದು, ಅವರ ನೀಚ ಬುದ್ದಿಯನ್ನು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೋಭಾ ಕರಾಂದ್ಲಾಜೆ ಅವರ ಇಂದಿನ ಮಾತನ್ನು ಗಮನಿಸಿದಲ್ಲಿ ಬಿಜೆಪಿಯವರು ಹೇಗೆ ನಡೆದುಕೊಳ್ಳುತ್ತಾರೆ, ಅವರ ಸಂಸ್ಕೃತಿ ಎಂತಹುದು ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತದೆ. ದಾಸರು ಒಂದು ಪದವನ್ನು ಹೇಳಿದ್ದು, ಬಿಡು ನಿನ್ನ ನೀಚ ಬುದ್ದಿಯ ಎಂದಿದ್ದಾರೆ. ಆದರೆ ಅದಕ್ಕೆ ಅಪವಾದವೆಂಬತೆ ಬಿಜೆಪಿ ನಾಯಕರಿದ್ದು, ಅವರ ನೀಚ ಬುದ್ದಿಯನ್ನು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಇದೇ ವೇಳೆ, ಪ್ರಧಾನಿ ಅಥವಾ ಮುಖ್ಯಮಂತ್ರಿ ಸ್ಥಾನಗಳು ಜನಾದೇಶ ಮೇರೆಗೆ ನಡೆಯುವ ಪವಿತ್ರ ಸ್ಥಾನಗಳು. ಅವರಿಗೆ ಯಾವ ಪಕ್ಷದವರಿದ್ದರೂ ಗೌರವ ಕೊಡಬೇಕು. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಕೂದಲಿಗೆ ಹೋಲಿಸಿ ಕೂದಲಿಗೂ ಸಮವಿಲ್ಲ ಎಂದು ಜರಿದಿದ್ದಾರೆ. ಅವರ ಹೇಳಿಕೆಯೇ ತಿಳಿಸುತ್ತದೆ ಬಿಜೆಪಿಯವರು ಎಂತಹ ನೀಚರೆಂದು. ಇದು ರಾಜ್ಯದ ಇಡೀ ಆರು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದಂತಾಗಿದೆ. ಹಾಗಾಗಿ ಅವರು ಕೂಡಲೇ ಜನತೆಯ ಹಾಗೂ ಸಿದ್ದರಾಮಯ್ಯ ಅವರ ಕ್ಷಮೆ ಯಾಚಿಸಲಿ ಎಂದು ಆಕ್ರೋಶಭರಿತರಾಗಿ ನುಡಿದರು. 

ಇನ್ನು ಇಂದು ಮಧ್ಯಾಹ್ನ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರೇ ನೀವು ನಮ್ಮ ಪ್ರಧಾನಿಯ ಬಗ್ಗೆ ಅವಹೇಳನವಾಗಿ ಮಾತನಾಡಬೇಡಿ, ಅವರ ಕೂದಲಿನ ಯೋಗ್ಯತೆ ನಿಮಗಿಲ್ಲ ಎಂದು ಸಿದ್ದರಾಮಯ್ಯ ಅವರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಉಗ್ರಪ್ಪ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada