Daily Horoscope
✕

ಮೇಕೆದಾಟು ಯೋಜನೆ ವಿರೋಧಿಸಿದವರಿಗೆ ಸನ್ಮಾನ, ಗೌರವ ಕೊಡಬೇಕೇ

ಸಂಪ್ರಿಯ
ಬುಧವಾರ, 29 ಜುಲೈ 2026 (20:56 IST)
Photo Credit X
ದೆಹಲಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರಕಾರ ಡಯಲಾಗ್‍ಗಳ, ನಟನೆಯ ಸರಕಾರ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಟೀಕಿಸಿದ್ದಾರೆ.

ಕರ್ನಾಟಕ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಆಗುವುದರಿಂದ ನಮ್ಮ ರಾಜ್ಯಕ್ಕೆ ಲಾಭ ಆಗುತ್ತದೆಯಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು. ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದು ಆಕ್ಷೇಪಿಸಿದರು. ಬೇಜವಾಬ್ದಾರಿ ಕಾರಣಕ್ಕಾಗಿಯೇ ನಾವು 4.56 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಯಿತು ಎಂದು ಆರೋಪಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಬೇಕಿತ್ತು. ನಮ್ಮ ಸರಕಾರ ಬಂದ ನಂತರ ಮೇಕೆದಾಟು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡುವುದಾಗಿ ಇದೇ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದರು. ಅದಕ್ಕೆ ವಿರೋಧ ಮಾಡಿದವರನ್ನು ಸನ್ಮಾನ ಮಾಡುವುದು ಯಾಕೆ ಎಂದು ಕೇಳಿದರು. ಈ ಕುರಿತು ನನಗೆ ನೋವಿದೆ ಎಂದರು.

ರಾಜ್ಯದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇಷ್ಟೊಂದು ಬರಗಾಲ ಬಂತಲ್ಲವೇ ಎಂದು ಕಣ್ಣೀರು ಹಾಕುವ ಪರಿಸ್ಥಿತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಳೆ ಮೈಸೂರು ಭಾಗವು ಸಂಪದ್ಭರಿತ ಪ್ರದೇಶ. ಈ ಹಳೆ ಮೈಸೂರು ಭಾಗದಲ್ಲಿ ಕೂಡ ಈಗ ನೀರಿಲ್ಲ. ಕಾವೇರಿ ನದಿ ನೀರು ವಿಚಾರದಲ್ಲಿ ನಮ್ಮ ಸರಕಾರ ಯಾರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಇಟ್ಟಿದ್ದರೋ ಅವರು ಸರಿಯಾಗಿ ವಾದ ಮಾಡಲು ಆಗಿಲ್ಲ. ಇವರು ಸರಿಯಾಗಿ ಆ ಕಡೆ ಗಮನ ಕೊಡುವುದಿಲ್ಲ ಎಂದು ಆಕ್ಷೇಪಿಸಿದರು.

ಇದೀಗ 4.56 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಾಯಿತು. ಎಷ್ಟು ದುರಂತದ ಪರಿಸ್ಥಿತಿ ಇದು ಎಂದು ತಿಳಿಸಿದರು. ಜೊತೆಗೇ ತಮಿಳುನಾಡಿನ ಮುಖ್ಯಮಂತ್ರಿ ಬರುತ್ತಿದ್ದಾರೆ. ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆ ಸೇರಿ ಆಳ್ವಿಕೆ ನಡೆಸುತ್ತಿದ್ದಾರೆ. ಇವರ ಬೇಜವಾಬ್ದಾರಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಆ ಮುಖ್ಯಮಂತ್ರಿಗೆ ನಮ್ಮ ಮುಖ್ಯಮಂತ್ರಿ ಸ್ವಾಗತ ಕೋರುತ್ತಿದ್ದಾರೆ. ನಮ್ಮ ಮೇಕೆದಾಟು ಯೋಜನೆಯನ್ನು ವಿರೋಧಿಸಿದ ಸರಕಾರ ತಮಿಳುನಾಡಿನದು. ತಮಿಳುನಾಡಿನ ಮುಖ್ಯಮಂತ್ರಿ ಬರುತ್ತಾರಂತೆ; ಅವರು ವಿಧಾನಸೌಧಕ್ಕೆ ಬಂದು ಅಲ್ಲಿ ಚರ್ಚಿಸುತ್ತಾರಂತೆ; ಅವರಿಗೆ ಸನ್ಮಾನ ಮಾಡುತ್ತಾರಂತೆ ಎಂದರಲ್ಲದೇ, ನಮ್ಮ ಯೋಜನೆಯನ್ನು ವಿರೋಧಿಸಿದ ತಮಿಳುನಾಡಿನ ಸಿಎಂಗೆ ಸನ್ಮಾನ, ಗೌರವ ಕೊಡುವುದು ಬೇಕಿತ್ತೇ ಎಂದು ಪ್ರಶ್ನಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಲೆ ಏರಿಕೆ ವಿರುದ್ಧ 3 ದಿನ ಪ್ರತಿಭಟನೆ

ಸಫಾರಿ ಮೋಜಿಗಾಗಿ ಬೈಕ್ ನಲ್ಲಿ ಸಿಂಹಗಳನ್ನೇ ಬೆನ್ನಟ್ಟಿದ್ರು: ನೆಟ್ಟಿಗರ ಭಾರೀ ಆಕ್ರೋಶ Video

ಆರ್‌ಎಸ್‌ಎಸ್‌ನವರು ಸುಮ್ನೆ ಬಿಡ್ತಾರಾ, ನನ್ನ, ಸಿಎಂ ಫೋನ್ ಟ್ಯಾಪ್ ಆಗ್ತಿರುತ್ತೆ: ಪ್ರಿಯಾಂಕ್ ಖರ್ಗೆ

ಎಂಥಾ ದುರಂತ…ಟ್ರೆಡ್ ಮಿಲ್ ಮಾಡುತ್ತಿದ್ದಾಗ ಆಯತಪ್ಪಿದ ಯುವತಿ: ಮುಂದೆ ಆಗಿದ್ದು ಘೋರ ದುರಂತ Video

ಟ್ರಯಲ್ ರೂಂಗೆ ಎಳೆದೊಯ್ದು ಯುವತಿಯನ್ನು ಬರ್ಬರವಾಗಿ ಕೊಂದ ನೀಚ: ಸಿಸಿಟಿವಿಯಲ್ಲಿ ಶಾಕಿಂಗ್ ದೃಶ್ಯ Video

ಮುಂದಿನ ಸುದ್ದಿ
Show comments