ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಗೆ ಹೊಸ ನಾಯಕನ ಆಗಮನವಾಗಲಿದೆ ಎಂಬ ನಿರೀಕ್ಷೆ ಇನ್ನೂ ಹುಸಿಯಾಗಿಯೇ ಉಳಿದಿದೆ.
ಇಷ್ಟು ದಿನ ಹಲವು ಕಾರಣಗಳನ್ನು ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಖಾಲಿ ಬಿಟ್ಟಿತ್ತು. ಇದೀಗ ಬಿಜೆಪಿ ನಾಯಕರು ಅಧ್ಯಕ್ಷರ ನೇಮಕಕ್ಕೆ ಪಿತೃ ಪಕ್ಷದ ನೆವ ನೀಡಿದ್ದಾರೆ.
ಬಿಜೆಪಿ ರಾಜ್ಯಾದ್ಯಕ್ಷ ಹುದ್ದೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹೆಸರು ಕೇಳಿಬರುತ್ತಿದೆ. ಆದರೆ ಪಿತೃಪಕ್ಷದಲ್ಲಿ ತಮ್ಮ ಪುತ್ರನಿಗೆ ಅಧಿಕಾರ ಕಟ್ಟಲು ಬಿಎಸ್ ವೈ ಒಪ್ಪಲ್ಲ ಎಂಬ ಮಾತು ಕೇಳಿಬರುತ್ತಿದೆ! ಅಲ್ಲಿಗೆ ಮತ್ತೆ ಬಿಜೆಪಿ ರಾಜ್ಯಾದ್ಯಕ್ಷರ ನೇಮಕ ತಡವಾಗುವುದು ಖಂಡಿತಾ ಎನ್ನಲಾಗಿದೆ.