ನನ್ನ ಪತಿ ನನಗೆ ಒಳ್ಳೆಯ ಗಂಡನೂ ಆಗಲಿಲ್ಲ ನನ್ನ ಮಕ್ಕಳಿಗೆ ಒಳ್ಳೆಯ ತಂದೆಯೂ ಆಗಲಿಲ್ಲ. ಇಂತಹ ವ್ಯಕ್ತಿಯಿಂದ ಪಕ್ಷ ಎನ್ನನ್ನು ನಿರೀಕ್ಷಿಸುತ್ತಿದೆ ತಿಳಿಯುತ್ತಿಲ್ಲ. ನನ್ನ ಗಂಡ ಕಾರ್ಪೊರೇಟರ್ ಆಗೋಕೆ ಯೋಗ್ಯನಲ್ಲ. ಆತನನ್ನು ಕಾರ್ಪೋರೇಟರ್ ಸ್ಥಾನದಿಂದ ವಜಾಗೊಳಿಸಿ ಎಂದು ಬಿಬಿಎಂಪಿ ಕಾರ್ಪೋರೇಟರ್ ಪತ್ನಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮೇಯರ್ ಮಂಜುನಾಥ ರೆಡ್ಡಿಗೆ ಪತ್ರ ಬರೆದಿದ್ದಾರೆ.
ಈ ರೀತಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮನವಿಮಾಡಿಕೊಂಡವರು ಬೆಂಗಳೂರು ನಗರದ ಬಾಗಲಗುಂಟೆ ವಾರ್ಡ್ ಕಾರ್ಪೋರೇಟರ್ ನರಸಿಂಹ ನಾಯಕ್ ಅವರ ಪತ್ನಿ ಗೌರಮ್ಮ, 1996 ರಲ್ಲಿ ವಿವಾಹವಾಗಿದ್ದ ನರಸಿಂಹ ನಾಯಕ್ ಮತ್ತು ಗೌರಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನರಸಿಂಹ ನಾಯಕ್ ತನ್ನ ಸ್ವಂತ ಅಕ್ಕನ ಮಗಳು ಭಾಗ್ಯಮ್ಮ ಅವರನ್ನು ಎರಡನೇಯ ವಿವಾಹವಾಗಿ ಸಂಸಾರ ಮಾಡುತ್ತಿದ್ದಾರೆ ಎಂದು ಗೌರಮ್ಮ ಆರೋಪಿಸಿದ್ದಾರೆ.
ಈ ಹಿಂದೆ ಪತಿ ನರಸಿಂಹ ನಾಯಕ್ ಸರಕಾರಿ ನೌಕರಿಯಲಿದ್ದಾಗ ಎರಡನೇಯ ವಿವಾಹವಾಗಿದ್ದಾನೆ ಎಂದು ಗೌರಮ್ಮ ನೀಡಿರುವ ದೂರಿನ ಮೇಲೆ ನರಸಿಂಹ ನಾಯಕ್ ನೌಕರಿಯಿಂದ ವಜಾಗೊಂಡಿದ್ದರು. ನಂತರ, ಮೊದಲ ಪತ್ನಿಯ ಜೊತೆಯೇ ವಾಸಿಸುತ್ತಿನಿ ಎಂದು ಹೇಳಿ ಬೆಂಗಳೂರಿಗೆ ಬಂದಿದ್ದ ನರಸಿಂಹ ನಾಯಕ್ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಕಾರ್ಪೋರೇಟರ್ ಸ್ಥಾನವನ್ನು ಅಲಂಕರಿಸಿದ್ದರು.
ಪ್ರಸ್ತುತವಾಗಿ ನರಸಿಂಹ ನಾಯಕ್ ಮೊದಲ ಹೆಂಡತಿಯನ್ನು ತೊರೆದಿದ್ದ ಕಾರಣ ನನ್ನ ಗಂಡ ಸಮಾಜ ಸೇವಕನಾಗಲು ಅರ್ಹನಲ್ಲ. ಆತನನ್ನು ಕಾರ್ಪೋರೇಟರ್ ಸ್ಥಾನದಿಂದ ವಜಾಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.