ಪರಿಷತ್ ಬಿಜೆಪಿ, ಕಾಂಗ್ರೆಸ್ ಫೈಟ್!

Webdunia
ಬುಧವಾರ, 16 ಫೆಬ್ರವರಿ 2022 (07:25 IST)
ಬೆಂಗಳೂರು : ಅನೈತಿಕ ಸರ್ಕಾರ ಅನ್ನೋದೊಂದೇ ಒಂದು ಪದ ಇವತ್ತು ಪರಿಷತ್ ಕಲಾಪದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಸಾಕ್ಷಿ ಆಯಿತು.
 
ಪರಸ್ಪರ ಮಾತಿನ ಚಕಮಕಿ ನಡೆದು ಸದಸ್ಯರ ನಡುವೆ ಕಿತ್ತಾಟಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲೆ ಕಾಂಗ್ರೆಸ್ನ ಯುಬಿ ವೆಂಕಟೇಶ್ ಭಾಷಣ ಮಾಡುತ್ತಿದ್ದರು.

ಈ ವೇಳೆ ಯುಬಿ ವೆಂಕಟೇಶ್, ಈ ಸರ್ಕಾರ ಅನೈತಿಕವಾಗಿ ಬಂದಿರೋ ಸರ್ಕಾರ ಅಂತ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ಅನೈತಿಕ ಸರ್ಕಾರ ಅಂದರೆ ಏನು ಕುಮಾರಸ್ವಾಮಿ- ಕಾಂಗ್ರೆಸ್ ಮಾಡಿದ್ದು ಯಾವ ಸರ್ಕಾರ ಎಂದು ನಾರಾಯಣಸ್ವಾಮಿ ಯುಬಿ ವೆಂಕಟೇಶ್ ವಿರುದ್ದ ತಿರುಗಿ ಬಿದ್ದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತ್ತು.

ಕಾಂಗ್ರೆಸ್ ಅವ್ರು ಅನೈತಿಕ ಸರ್ಕಾರ ಮಾಡಿದ್ದು, ಅಂತ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದರು. ಅನೈತಿಕ ಸರ್ಕಾರ ಅನ್ನೋ ಪದ ಕಡತದಿಂದ ತೆಗೆಯುವಂತೆ ಬಿಜೆಪಿ ಸದಸ್ಯರು ಒತ್ತಾಯ ಮಾಡಿದರು. ಆದರೆ ಅನೈತಿಕ ಸರ್ಕಾರ ಅನ್ನೋದು ಅಸಂವಿಧಾನಿಕ ಪದ ಅಲ್ಲ ಅಂತ ಸಭಾಪತಿ ಸ್ಥಾನದಲ್ಲಿ ಇದ್ದ ಶ್ರೀಕಂಠೇಗೌಡ ತಿಳಿಸಿದರು. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶದ ಜನರಿಗೆ ಭಯಬೇಡ ಅಂತಾರೆ, ತಾವೇ ಹೆದರುತ್ತಾರೆ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ರಾಹುಲ್ ಗಾಂಧಿ

ಸ್ಕೂಟಿಗೆ ಡಿಕ್ಕಿ ಹೊಡೆದು ಚೈನು ಕದ್ದು ಓಡಲೆತ್ನಿಸಿದ ಕಳ್ಳ: ನೆರೆಮನೆ ಯುವಕ ಮಾಡಿದ ಕೆಲಸಕ್ಕೆ ಶಹಬ್ಬಾಶ್ Video

ಪೊಲೀಸರದ್ದು ಇದೆಂಥಾ ಕೆಲಸ.. ನಾಚಿಕೆಯಾಗಲ್ವಾ ಎಂದ ಪಬ್ಲಿಕ್ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಇಸ್ರೇಲ್ ಇರಾನ್ ಯುದ್ಧಕ್ಕೆ ಮಹತ್ವದ ಟ್ವಿಸ್ಟ್: ಯುದ್ಧ ಕೊನೆಗೊಳಿಸಲು ರೆಡಿ ಎಂಬ ಇರಾನ್

ಮುಂದಿನ ಸುದ್ದಿ
Show comments