ಬೈಕ್ ಕಳ್ಳರ ಬಂಧನ : 4 ಲಕ್ಷ ಮೌಲ್ಯದ ವಾಹನಗಳ ಜಪ್ತಿ

Webdunia
ಶುಕ್ರವಾರ, 1 ಫೆಬ್ರವರಿ 2019 (17:22 IST)
ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಪೊಲೀಸರು 4 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಕಲಬುರಗಿ ನಗರ ಹೊರವಲಯದ ಸುಲ್ತಾನಪುರ ಕ್ರಾಸ್ ಇಟ್ಟಂಗಿ ಭಟ್ಟಿಯ ಮಹ್ಮದ್ ಗೌಸ್ ಮಹ್ಮದ್ ಶಫಿ ಸೊಲ್ಲಾಪೂರವಾಲೆ (23) ಮತ್ತು ಮಿಲ್ಲತ್ ನಗರದ ಮಕದೂಮ ಪತ್ರುಸಾಬ ರಟಕಲ್ (21) ಎಂಬುವವರನ್ನು ಬಂಧಿಸಿ 3 ಬೈಕ್, ಒಂದು ಟಾಟಾ ಎಸಿ ವಾಹನ ಸೇರಿ 40 ಲಕ್ಷ ರೂಪಾಯಿ ಬೆಲೆಬಾಳುವ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ನಂದಿಕೂರ ತಾಂಡಾದ ಶಾಂತಪ್ಪ ಹಣಮಂತ ಕಾಳೆ ಅವರ ಬೈಕ್ ಕಳವಾಗಿತ್ತು. ಸಂಬಂಧ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸಂಬಂಧ ಎಸ್ಪಿ ಎನ್.ಶಶಿಕುಮಾರ, ಹೆಚ್ಚುವರಿ ಎಸ್ಪಿ ಪ್ರಸನ್ನ ಬಿ.ದೇಸಾಯಿ ಮಾರ್ಗದರ್ಶನದಲ್ಲಿ ಗ್ರಾಮೀಣ ಉಪ ವಿಭಾಗದ ಡಿಎಸ್ಪಿ ಎಸ್.ಎಸ್.ಹುಲ್ಲೂರ, ಎಂ.ಬಿ.ನಗರ ಸಿಪಿಐ .ವಾಜೀದ್ ಪಟೇಲ್, ಫರಹತಾಬಾದ ಪೊಲೀಸ್ ಠಾಣೆ ಪಿಎಸ್ಐ ಸುರೇಶಕುಮಾರ, ಸಿಬ್ಬಂದಿ ವಿಶೇಷ ತಂಡ ರಚಿಸಿದ್ದರು.

ತಂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನ ಮಾಡಿದ ದೃಶ್ಯಾವಳಿ ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವಾದ ಬೈಕ್ ಮತ್ತು ಇತರ ಕಡೆ ಕಳ್ಳತನ ಮಾಡಿದ ಎರಡು ಬೈಕ್ ಮತ್ತು ಕೃತ್ಯಕ್ಕೆ ಬಳಸಿದ ಟಾಟಾ ಎಸ್ ವಾಹನ ಜಪ್ತಿ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ತಂದ್ರೂ ಎಲ್ರೂ ಮೋದಿ ಮೋದಿ ಅಂತಾರೆ: ಸಿದ್ದರಾಮಯ್ಯ ಬೇಸರ

ಈಗ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆಯೇ ಒಡಕು: ನನ್ನನ್ನೂ ಕರೀಬಹುದಿತ್ತು ಎಂದವರು ಯಾರು ನೋಡಿ

ಸಿಎಂ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಎಂದ ಡಿಕೆ ಶಿವಕುಮಾರ್: ಡಿನ್ನರ್ ಪಾರ್ಟಿನೂ ಮಾಡಿ ಎಂದ ನೆಟ್ಟಿಗರು

ಸಿದ್ದರಾಮಯ್ಯಗೆ ಸುಮ್ನೇ ಬ್ರೇಕ್ ಫಾಸ್ಟ್ ಗೆ ಕರೆದಿಲ್ಲ ಡಿಕೆ ಶಿವಕುಮಾರ್: ನಡೆದಿದೆ ಭರ್ಜರಿ ಪ್ಲ್ಯಾನ್

ಚಿಕ್ಕಪೇಟೆ ಮಾಜಿ ಸಚಿವ ಆರ್ ವಿ ದೇವರಾಜ್ ಹೃದಯಸ್ತಂಬನದಿಂದ ಸಾವು

ಮುಂದಿನ ಸುದ್ದಿ
Show comments