Webdunia - Bharat's app for daily news and videos

Install App

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರ: ಮಾನವೀಯತೆ ಮರೆತ ಜನರು

Webdunia
ಶನಿವಾರ, 13 ಫೆಬ್ರವರಿ 2016 (13:35 IST)
ಬೆಂಗಳೂರಿನಲ್ಲಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರನನ್ನು ರಕ್ಷಿಸಲು ಯಾರೂ ಮುಂದೆ ಬರದೇ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆಹಿಡಿಯುವ ಧಾವಂತದಲ್ಲಿ ಜನರು ಮುಳುಗಿದ ಘಟನೆ ಸಂಭವಿಸಿದೆ.  ಗಾಯಗೊಂಡು ಬಿದ್ದಿದ್ದ ಬೈಕ್ ಸವಾರ ಅಣ್ಣಮಲೈ ರಾಜು ಎಂಬವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವುದಕ್ಕೆ ಯಾರೊಬ್ಬರೂ ಮುಂದೆ ಬರದೇ ಮಾನವೀಯತೆ ಮರೆತುಹೋದಂತೆ ವಾಹನ ಚಾಲಕರು ವರ್ತಿಸಿದರು.

 ಕರ್ನೂಲು ಜಿಲ್ಲೆಯವರಾದ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,  ಬೆಳಿಗ್ಗೆ 11 ಗಂಟೆ ಸುಮಾರಿಗೆ ದೇವನಹಳ್ಳಿ ಕಡೆಗೆ ವಾಪಸು ಹೋಗುತ್ತಿದ್ದ ಸಂದರ್ಭದಲ್ಲಿ ಚಿಕ್ಕಜಾಲದ ಬಳಿ  ಬೈಕ್ ಡಿವೈಡರ್‌ಗೆ ಡಿಕ್ಕಿಹೊಡೆದು ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದ್ದರಿಂದ ಅವರಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿತ್ತು.  ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದರೂ ಯಾವ ವಾಹನ ಚಾಲಕರೂ ಅವರ ನೆರವಿಗೆ ಬಂದಿರಲಿಲ್ಲ.  

ವಾಹನ ಮಾಲೀಕರಿಗೆ ಅವರನ್ನು ಆಸ್ಪತ್ರೆಗೆ ಸೇರಿಸುವಂತೆ ಅಂಗಲಾಚಿದರೂ ಯಾರ ಮನಸ್ಸೂ ಕರಗಲಿಲ್ಲ ಎಂದು ದಾರಿಹೋಕರು ಹೇಳಿದ್ದಾರೆ. ವಾಹನದಲ್ಲಿ ರಕ್ತದ ಕಲೆಗಳಾಗುತ್ತವೆಂಬ ಕಾರಣದ ಮೇಲೆ ಕೆಲವು ಚಾಲಕರು  ವಾಹನದಲ್ಲಿ ಕರೆದೊಯ್ಯಲು ನಿರಾಕರಿಸಿದರು.  ಸುಮಾರು 10 ನಿಮಿಷಗಳವರೆಗೆ ಯಾರೂ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಲಿಲ್ಲ,.  ಕೆಲವರು ಆಂಬ್ಯುಲೆನ್ಸ್‌ಗೆ ಕರೆ ಮಾಡುವ ಯತ್ನದಲ್ಲಿದ್ದರು.  ಕೊನೆಗೆ ಪೊಲೀಸರಿಗೆ ಹೊಯ್ಸಳ ಜೀಪ್‌ ಅಲ್ಲಿಗೆ ಆಗಮಿಸಿದಾಗ ಜೀಪಿನಲ್ಲಿ ಕರೆದುಕೊಂಡುಹೋಗಿ  ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments