Webdunia - Bharat's app for daily news and videos

Install App

ನೇಪಾಳದ ಕರಾಳ ಕಥೆ: ಇಂದು ಮತ್ತೆ ನಡುಗಿದ ಭೂಮಿ

Webdunia
ಸೋಮವಾರ, 27 ಏಪ್ರಿಲ್ 2015 (11:55 IST)
ನೇಪಾಳದಲ್ಲಿ ಕಳೆದ ಮೂರು ದಿನಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದು, ಇಂದೂ ಕೂಡ ಇಡೀ ನೇಪಾಳವೇ ಅಗಾಧ ಪ್ರಮಾಣದಲ್ಲಿ ನಡುಗುವ ಮೂಲಕ ಮತ್ತೆ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದೆ. 
 
ಇಂದು ಬೆಳಗ್ಗೆ 06.05ರಿಂದ 06.25ರ ವೇಳೆ ಒಳಗೆ ನಾಲ್ಕು ಬಾರಿ ಭೂಕಂಪನ ಸಂಭವಿಸಿದ್ದು, 6.7 ತೀವ್ರತೆ ದಾಖಲಾಗಿದೆ. ಪರಿಣಾಮ ದೇಶಾದ್ಯಂತ ಮತ್ತೆ ಸಾಕಷ್ಟು ಹಾನಿ ಉಂಟಾಗಿದೆ. 
 
ಭೂಕಂಪನವು ಇಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಇಲ್ಲಿಯವರೆಗೆ 70 ಬಾರಿ ನಡುಗಿದೆ. ಪರಿಣಾಮ ರಾಜಧಾನಿ ಕಠ್ಮಂಡು ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಅಗಾಧ ಕಟ್ಟಡಗಳೆಲ್ಲವೂ ನೆಲಕ್ಕುರುಳಿದ್ದು, ಸುಮಾರು 62000ಕ್ಕೂ ಅಧಿಕ ನೇಪಾಳಿಗರ ಜೀವನ ಅಸ್ತವ್ಯಸ್ತವಾಗಿದೆ. ಘಟನೆಯಲ್ಲಿ ಇಲ್ಲಿಯವರೆಗೂ 3250 ಮಂದಿ ಸಾವನ್ನಪ್ಪಿದ್ದು, 9000 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಉಳಿದ ನಾಗರೀಕರ ರಕ್ಷಣಾ ಕಾರ್ಯ ಮುಂದುವರಿದಿದೆ. 
 
ಭಾರತ ಸೇರಿದಂತೆ ಅಮೇರಿಕಾ, ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದು, ಭರದಿಂದ ಸಾಗಿದೆ. ಆದರೆ ಪ್ರಸ್ತುತ ಮಳೆ ಸುರಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎನ್ನಲಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳೂ ಹರಡಬಹುದು ಎಂಬ ಆತಂಕ ಇಲ್ಲಿನ ಸಾರ್ವಜನಿಕರಲ್ಲಿ ಮನೆ ಮಾಡಿದೆ. 
 
ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ಭಾರತದ ವಾಯು ದಳ ಹಾಗೂ ವಿಕೋಪ ರಕ್ಷಣಾ ಪಡೆಯ ತಂಡಗಳು, ನೇಪಾಳದಲ್ಲಿ ಬೀಡು ಬಿಟ್ಟಿದ್ದು ಸಾರ್ವಜನಿಕರ ರಕ್ಷಣೆಯಲ್ಲಿ ನಿರತವಾಗಿವೆ. 
 
ಭೂಕಂಪನದಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜನರು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಆದ್ದರಿಂದ ಭಾರತದಿಂದ ವಿಶೇಷ ವಿಮಾನಗಳ ಮೂಲಕ ಅಗತ್ಯ ಆಹಾರ, ಔಷಧಿ ಹಾಗೂ ಇನ್ನಿತರೆ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತಿದೆ. 
 
ಇಲ್ಲಿಯವರೆಗೂ ನೇಪಾಳಕ್ಕೆ ಪ್ರವಾಸಕ್ಕೆಂದು ತೆರಳಿದ್ದ 1935 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಕ್ಷಣೆಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದ್ದು, ತುರ್ತು ರೀತಿಯ ರಕ್ಷಣಾ ಕಾರ್ಯಕ್ಕೆ ಸ್ಪಂಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments