ಭದ್ರಾ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ಅಕ್ಕ ಪಕ್ಕದ ಹಳ್ಳಿಗಳ ಜನರ ಬದುಕು ಸಂಪೂರ್ಣವಾಗಿ ಅಭದ್ರವಾಗಿದೆ.
ದಾವಣಗೆರೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಸತತ ಐದು ದಿನಗಳಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ.
ಇದ್ರಿಂದ ದಾವಣಗೆರೆಯ ಜೀವನಾಡಿ ಭದ್ರ ಜಲಾಶಯದಲ್ಲಿ ನೀರಿನ ಶೇಖರಣೆ ಹೆಚ್ಚಾಗಿದ್ದು, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹರಿಹರದ ಉಕ್ಕಡಗಾತ್ರಿಯ ಕರಿಬಸವೇಶ್ವ ದೇವಸ್ಥಾನದ ಮೆಟ್ಟಿಲು ಭಾಗದವರೆಗೂ ನದಿ ನೀರು ಬಂದಿದೆ.
ಉಕ್ಕಡಗಾತ್ರಿ- ಪತ್ತೆಪುರ, ಸಾರಥಿ - ಚಿಕ್ಕಬಿದರೆ, ಹರಪನಹಳ್ಳಿಯ ಹಲುವಾಗಲು - ಕಡತಿ ರಸ್ತೆ ಮಾರ್ಗ ಕಡಿತಗೊಂಡಿದೆ. ಕಡಿತಗೊಂಡ ಹಳ್ಳಿಗಳ ಜನರಿಗೆ ದಿಕ್ಕುತೋಚದಂತಾಗಿದೆ. ಇನ್ನು ನೆರೆ ಸಂತ್ರಸ್ತರಿಗಾಗಿ ದಾವಣಗೆರೆ ಜಿಲ್ಲಾಡಳಿತದಿಂದ ಸಕಲ ಅಗತ್ಯ ಕ್ರಮ ಜರುಗಿಸಲು ಮುಂದಾಗಲಾಗುತ್ತಿದೆ.
ನದಿಯ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಸುರಕ್ಷಿತ ಸ್ಥಳಕ್ಕೆ ಸಂತ್ರಸ್ತರು ತೆರಳುವಂತೆ ಅಧಿಕಾರಿಗಳು ಮನವಿ ಮಾಡ್ತಿದ್ದಾರೆ.